ADVERTISEMENT

ಲಿಂಗಸುಗೂರು | ಹೆಚ್ಚುತ್ತಿರುವ ಪ್ರವಾಹ: ನದಿ ದಂಡೆ ಗ್ರಾಮಗಳಲ್ಲಿ ಹೆಚ್ಚಿದ ಆತಂಕ

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 15:09 IST
Last Updated 28 ಜುಲೈ 2024, 15:09 IST
ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದ್ದು, ಕೃಷ್ಣಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ
ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದ್ದು, ಕೃಷ್ಣಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ    

ಲಿಂಗಸುಗೂರು: ನಾರಾಯಣಪುರ ಅಣೆಕಟ್ಟೆ ಕ್ರಸ್ಟ್‌ಗೇಟ್ ಮೂಲಕ ಕೃಷ್ಣಾ ನದಿಗೆ ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಡುತ್ತಿರುವುದರಿಂದ ನದಿ ದಂಡೆ ಗ್ರಾಮಗಳ ಜನತೆಯಲ್ಲಿ ಆತಂಕ ಹೆಚ್ಚಿದೆ.
ನಾರಾಯಣಪುರ ಅಣೆಕಟ್ಟೆಯಿಂದ ಭಾನುವಾರ ಹೆಚ್ಚುವರಿ 3.27ಲಕ್ಷ ಕ್ಯುಸೆಕ್ ನೀರು ಹರಿಬಿಡಲಾಗಿದೆ. ತಾಲ್ಲೂಕಿನ ಕರಕಲಗಡ್ಡ, ಮ್ಯಾದರಗಡ್ಡಿ, ವಂಕಮ್ಮನಗಡ್ಡಿ ಪ್ರದೇಶದ ಜನ ಹಾಗೂ ಜಾನುವಾರು ಸಂಕಷ್ಟಕ್ಕೆ ಸುಲುಕಿವೆ. ನದಿ ಪಾತ್ರದಲ್ಲಿದ್ದ ಪಂಪಸೆಟ್ ಮುಳುಗಿದ್ದು, ಕೆಲವು ಕೊಚ್ಚಿಕೊಂಡು ಹೋಗಿವೆ.

ನದಿ ಪಾತ್ರದ ಶೀಲಹಳ್ಳಿ, ಗೋನವಾಟ್ಲ, ಗುಂತಗೋಳ, ಟಣಮಕಲ್ಲು, ಗದ್ದಿಗೆ, ಹಂಚಿನಾಳ, ಯಳಗುಂದಿ, ಯರಗೋಡಿ, ಕಡದರಗಡ್ಡಿ, ಜಲದುರ್ಗ ರೈತರ ಪಂಪಸೆಟ್ ಕೊಚ್ಚಿ ಹೋಗಿ ಅಪಾರ ನಷ್ಟ ಸಂಭವಿಸಿದ್ದು. ಬಹುತೇಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT