ADVERTISEMENT

ದೇವದುರ್ಗ ಶಾಸಕಿ ಕರೆಮ್ಮ ನಾಯಕ ಸಂಚರಿಸುತ್ತಿದ್ದ ಕಾರು ಅಪಘಾತ; ಅಪಾಯದಿಂದ ಪಾರು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 6:49 IST
Last Updated 12 ಅಕ್ಟೋಬರ್ 2025, 6:49 IST
   

ಲಿಂಗಸುಗೂರು: ದೇವದುರ್ಗ ಶಾಸಕಿ ಕರೆಮ್ಮೆ ಜಿ ನಾಯಕ ಅವರ ಕಾರು ತಾಲ್ಲೂಕಿನ ಗೊಲ್ಲಪಲ್ಲಿ ಘಾಟಿ ಬಳಿ ಅಪಘಾತಕ್ಕೊಳಗಾಗಿದೆ.

ದೇವದುರ್ಗದಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಶಾಸಕಿ ಕರೆಮ್ಮ ನಾಯಕ ಅವರು ತಾಲ್ಲೂಕಿನ ಗೊಲ್ಲಪಲ್ಲಿ ಘಾಟಿ ಬಳಿ ಅವರ ಕಾರಿಗೆ ಅಡ್ಡಬಂದ ನಾಯಿ ಉಳಿಸಲು ಕಾರಿನ ಚಾಲಕ ಬ್ರೇಕ್ ಹಿಡಿದಿದ್ದರಿಂದ ಹಿಂದಿನಿಂದ ಬರುತ್ತಿದ್ದ ಶಾಸಕರ ಬೆಂಬಲಿಗರ ಕಾರು ಶಾಸಕರ ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ತಮ್ಮ ಕಾರಿನಲ್ಲಿ ಮುಂದೆ ಕುಳಿತ ಶಾಸಕಿ ಕರೆಮ್ಮ ನಾಯಕ ಅವರು ಎದೆ ಹಾಗೂ ಹಣೆಗೆ ಒಳಪೆಟ್ಟಾಗಿದ್ದು ಅವರು ಪಟ್ಟಣದ ಸರ್ಕಾರಿ ಆಸ್ಪತ್ರೆ ಚಿಕಿತ್ಸೆ ಪಡೆದು ಹುಬ್ಬಳ್ಳಿಯತ್ತ ಮತ್ತೆ ಪ್ರಯಾಣಿಸಿದರು.

'ಗೊಲ್ಲಪಲ್ಲಿ ಘಾಟಿ ಅತ್ಯಂತ ಕಿರಿದಾಗಿದ್ದು, ನಾಯಿ ಉಳಿಸಲು ಹೋಗಿ ಅಪಘಾತವಾಗಿದೆ. ಯಾವುದೇ ಗಂಭೀರ ಗಾಯವಾಗಿಲ್ಲ, ಕ್ಷೇತ್ರದ ಜನತೆ ಆತಂಕ ಪಡುವ ಅಗತ್ಯವಿಲ್ಲ' ಎಂದು ಶಾಸಕಿ ಕರೆಮ್ಮ ನಾಯಕ ಹೇಳಿದರು.

ADVERTISEMENT

ಅಪಘಾತದಲ್ಲಿ ಗಾಯಗೊಂಡು ಶಾಸಕಿ ಕರೆಮ್ಮ ನಾಯಕಿ ಅವರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುದ್ದಿ ತಿಳಿದು ಸ್ಥಳೀಯ ಶಾಸಕ ಮಾನಪ್ಪ ವಜ್ಜಲ್ ಆಸ್ಪತ್ರೆಗೆ ಬೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.