ADVERTISEMENT

ರಾಯಚೂರು ಜಿಲ್ಲಾ ಉತ್ಸವದಲ್ಲಿ ಸಾಹಸದಾಟಗಳ ಮೆರುಗು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 4:01 IST
Last Updated 7 ಫೆಬ್ರುವರಿ 2026, 4:01 IST
<div class="paragraphs"><p>ರಾಯಚೂರು ಜಿಲ್ಲಾ ಉತ್ಸವದ ಪ್ರಯುಕ್ತ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ನಡೆಯಿತು</p></div>

ರಾಯಚೂರು ಜಿಲ್ಲಾ ಉತ್ಸವದ ಪ್ರಯುಕ್ತ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ನಡೆಯಿತು

   

ರಾಯಚೂರು: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದಲ್ಲಿ ಶುಕ್ರವಾರ ಜನರು ಗ್ರಾಮೀಣ ಸಾಹಸ ಕ್ರೀಡೆಗಳನ್ನು ಕಣ್ತುಂಬಿಕೊಂಡರು.

ನಗರದ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಗ್ರಾಮೀಣ ಕ್ರೀಡೆಗಳಾದ ಕುಸ್ತಿ, ಸಂಗ್ರಾಣಿ ಕಲ್ಲು, ಉಸುಕಿನ ಚೀಲ ಎತ್ತುವ ಸ್ಪರ್ಧೆಗಳು ನೋಡಗರ ಕಣ್ಣಿಗೆ ಹಬ್ಬವನ್ನುಂಟು ಮಾಡಿದವು.

ADVERTISEMENT

ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಪುರುಷ, ಮಹಿಳಾ ಕುಸ್ತಿ ಪಟುಗಳು ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎಡದೊರೆ ಕೇಸರಿ, ಎಡದೊರೆ ಕಂಠೀರವ, ಎಡದೊರೆ ಕುಮಾರ, ಎಡದೊರೆ ಕುಮಾರಿ, ಎಡದೊರೆ ಕಿಶೋರಿ ಹೆಸರಿನಲ್ಲಿ ಸ್ಪರ್ಧೆಗಳು ನಡೆದವು.

ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಪೈಲ್ವಾನರು ಆಗಮಿಸಿದ್ದರು. ಪ್ರಥಮ ಬಹುಮಾನ ಗೆಲ್ಲುವುದಕ್ಕಾಗಿ ಜಗಜಟ್ಟಿಗಳು ಮೈಕೊಡವಿ ಹೋರಾಡಿದರು. ಇದನ್ನು ಕಂಡು ಕುಸ್ತಿ ಅಭಿಮಾನಿಗಳು ಸಂಭ್ರಮಿಸಿದರು.

ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಪ್ರೇಕ್ಷಕರು ಕೇಕೆ ಹಾಕಿದರು. ಚಪ್ಪಾಳೆ ತಟ್ಟಿದರು. ಇದರಿಂದ ಹೆಚ್ಚಿನ ತೂಕದ ಕಲ್ಲು ಎತ್ತುವ ಶಕ್ತಿಶಾಲಿ ಯುವಕರಿಗೆ ಪ್ರೋತ್ಸಾಹ ಸಿಕ್ಕಂತಾಗುತ್ತಿತ್ತು. ಗ್ರಾಮೀಣ ಸಾಹಸ ಕ್ರೀಡೆಗಳಲ್ಲಿ ಒಂದಾದ ಒಂದು ಕ್ವಿಂಟಲ್ ಉಸುಕಿನ ಚೀಲ ಎತ್ತುವ ಸ್ಪರ್ಧೆ ನಡೆಯಿತು. ಕ್ಷಣಾರ್ಧದಲ್ಲಿ ಚೀಲ ಎತ್ತುವ ಸಾಹಸಿಗಳನ್ನು ಕಂಡು ಪ್ರೇಕ್ಷಕರು ರೋಮಾಂಚನಗೊಂಡಿತು.

ದೈಹಿಕ ಕಸರತ್ತು ತೋರಿಸುವ ಗ್ರಾಮೀಣ ಕ್ರೀಡೆಗಳಿಗೆ ಉತ್ಸವದಲ್ಲಿ ಅವಕಾಶ ನೀಡಿದ ಕಾರಣ ಗ್ರಾಮೀಣ ಸಾಹಸ ಕ್ರೀಡೆಗಳಿಗೆ ಮತ್ತುಷ್ಟು ಜೀವಕಳೆ ಬಂದಿದೆ. ಪ್ರತಿ ವರ್ಷ ಉತ್ಸವ ಆಯೋಜಿಸಬೇಕು. ಅದರಲ್ಲಿ ಗ್ರಾಮೀಣ ಸಾಹಸ ಕ್ರೀಡೆಗಳಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ಕ್ರೀಡಾಪಟು ಪ್ರತಾಪ ಹೇಳುತ್ತಾರೆ.

ಜಗಜಟ್ಟಿಗಳ ಕುಸ್ತಿ
ಉಸುಕಿನ ಚೀಲ ಎತ್ತುತ್ತಿರುವ ಸಾಹಸಿ ಕ್ರೀಡಾಪಟು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.