
ಆರ್. ಬಸನಗೌಡ ತುರುವಿಹಾಳ
ಮಸ್ಕಿ: ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಪ್ರತ್ಯೇಕ ನಗರ ಯೋಜನಾ ಪ್ರಾಧಿಕಾರ ರಚಿಸಿದೆ.
ಶಾಸಕ ಆರ್ ಬಸನಗೌಡ ತುರ್ವಿಹಾಳ ಅವರ ಮನವಿ ಮೇರೆಗೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಲತಾ ಕೆ. ಅವರು ಪ್ರಾಧಿಕಾರ ರಚಿಸಿ ಆದೇಶ ಹೊರಡಿಸಿದ್ದಾರೆ. ಪ್ರಾಧಿಕಾರದ ವ್ಯಾಪ್ತಿಗೆ 11 ಗ್ರಾಮಗಳನ್ನು ಸೇರಿಸಲಾಗಿದೆ.
ಈ ಕುರಿತು ಭಾನುವಾರ ಮಾಹಿತಿ ನೀಡಿದ ಶಾಸಕರು,‘ಮಸ್ಕಿಯ ವೇಗವಾಗಿ ವಿಸ್ತರಿಸುತ್ತಿರುವ ನಗರೀಕರಣದ ಹಿನ್ನೆಲೆಯಲ್ಲಿ ಪ್ರತ್ಯೇಕ ಯೋಜನಾ ಪ್ರಾಧಿಕಾರ ಅಗತ್ಯವಿತ್ತು. ಈಗ ಸರ್ಕಾರದ ತೀರ್ಮಾನದಿಂದ ಮಸ್ಕಿಯ ಅಭಿವೃದ್ಧಿಗೆ ಹೊಸ ದಿಕ್ಕು ಸಿಗಲಿದೆ’ ಎಂದಿದ್ದಾರೆ.
‘ಪ್ರತ್ಯೇಕ ಪ್ರಾಧಿಕಾರ ರಚನೆಯ ಮೂಲಕ ರಸ್ತೆ, ನೀರು, ಒಳಚರಂಡಿ, ವಸತಿ, ವಾಣಿಜ್ಯ ಮತ್ತು ಕೈಗಾರಿಕಾ ಪ್ರದೇಶಗಳ ಯೋಜಿತ ಅಭಿವೃದ್ಧಿ ಸಾಧ್ಯವಾಗಲಿದೆ. ಇದರಿಂದ ಮಸ್ಕಿ ಪಟ್ಟಣವು ಮುಂದಿನ ದಿನಗಳಲ್ಲಿ ಮಾದರಿ ನಗರವಾಗಿ ರೂಪುಗೊಳ್ಳಲಿದೆ’ ಎಂದು ತಿಳಿಸಿದ್ದಾರೆ.
ಪ್ರಾಧಿಕಾರಕ್ಕೆ ಮಸ್ಕಿ ಸೇರಿ ತಾಲ್ಲೂಕಿನ ಹಿರೇಕಡಬೂರು, ಚಿಕ್ಕಕಡಬೂರು, ಸುಂಕನೂರು, ಪರಾಪೂರ, ಸಾನಬಾಳ, ವೆಂಕಟಾಪೂರ, ಮುದಬಾಳ, ಗುಡದೂರು, ನಾಗರಬೆಂಚಿ, ಹಿರೇ ಅಂತರಗಂಗಿಯನ್ನು ಸೇರಿಸಲಾಗಿದೆ. ಅಧ್ಯಕ್ಷ, ಸದಸ್ಯ ಕಾರ್ಯದರ್ಶಿ, ಪುರಸಭೆ ಮುಖ್ಯಾಧಿಕಾರಿ ಹಾಗೂ ಚುನಾಯಿತ ಸದಸ್ಯರೊಬ್ಬರು ಹಾಗೂ ಸರ್ಕಾರದಿಂದ ನೇಮಿಸ್ಪಡುವ ಮೂವರು ಸದಸ್ಯರನ್ನು ಪ್ರಾಧಿಕಾರ ಹೊಂದಲಿದೆ.
ನಗರ ಯೋಜನಾ ಪ್ರಾಧಿಕಾರ ಕಾರ್ಯಾರಂಭ ನಂತರ ಜನಪರ ಯೋಜನೆಗಳ ಅನುಷ್ಠಾನ ವೇಗ ಪಡೆಯಲಿದೆಆರ್.ಬಸನಗೌಡ ತುರ್ವಿಹಾಳ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.