ADVERTISEMENT

ರಾಯಚೂರು | ‘ಷೇಕ್ಸ್‌ಪಿಯರ್ ನಾಟಕಗಳು ಇಂದಿಗೂ ಪ್ರಸ್ತುತ’

ವಾಲ್ಮೀಕಿ ವಿವಿ : ಇಂಗ್ಲಿಷ್ ಲಿಟರರಿ ಕ್ಲಬ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 8:22 IST
Last Updated 31 ಡಿಸೆಂಬರ್ 2025, 8:22 IST
ರಾಯಚೂರು ಸಮೀಪದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಅವರು ಇಂಗ್ಲಿಷ್ ಲಿಟರರಿ ಕ್ಲಬ್ ಉದ್ಘಾಟಿಸಿದರು
ರಾಯಚೂರು ಸಮೀಪದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಅವರು ಇಂಗ್ಲಿಷ್ ಲಿಟರರಿ ಕ್ಲಬ್ ಉದ್ಘಾಟಿಸಿದರು   

ರಾಯಚೂರು: ‘ವಿಲಿಯಂ ಷೇಕ್ಸ್‌ಪಿಯರ್ ಅವರ ನಾಟಕಗಳು ಇಂದಿಗೂ ಪ್ರಸ್ತುತವಾಗಿವೆ’ ಎಂದು ಕಲ್ಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ.ಬಸವರಾಜ ಡೊಣೂರು ಹೇಳಿದರು.

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಿಂದ ಆಯೋಜಿಸಿದ್ದ ಇಂಗ್ಲಿಷ್ ಲಿಟರರಿ ಕ್ಲಬ್ ಉದ್ಘಾಟನೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಮಾತನಾಡಿ, ‘ಪಾಶ್ಚಾತ್ಯ ಸಾಹಿತ್ಯ ಭಾರತದಲ್ಲಿನ ಸಮಾಜಕ್ಕೆ ಬಹುದೊಡ್ಡ ಬದಲಾವಣೆ ಮತ್ತು ಪರಿವರ್ತನೆ ತಂದುಕೊಟ್ಟಿದೆ’ ಎಂದು ಅವರು ಹೇಳಿದರು.

ADVERTISEMENT

ವಿಶೇಷ ಆಹ್ವಾನಿತರಾಗಿದ್ದ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ವೆಂಕಟಗಿರಿ ದಳವಾಯಿ ಮಾತನಾಡಿ, ‘ಭಾಷೆಯಾಗಿ ಕಲಿಯುವುದು ಹೇಗೆ ಮತ್ತು ಜ್ಞಾನವಾಗಿ ಸ್ವೀಕರಿಸುವುದು ಹೇಗೆ ಎಂದು ಕುವೆಂಪು ಅವರು ತಮ್ಮ ಲೇಖನದಲ್ಲಿ ಹೇಳಿದ್ದಾರೆ. ಕನ್ನಡದ ಮೇರು ಸಾಹಿತ್ಯಕ್ಕೆ ಕನ್ನಡಿಗ ಇಂಗ್ಲಿಷ್ ಮೇಷ್ಟ್ರುಗಳು ನೀಡಿದ ಕೊಡುಗೆ ಅನನ್ಯ‘ ಎಂದು ಬಣ್ಣಿಸಿದರು.

ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕ .ಚಾಂದ್‍ಬಾಷಾ ಉಪನ್ಯಾಸ ನೀಡಿದರು.

ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪ್ರೊ.ಪಾರ್ವತಿ ಸಿ.ಎಸ್., ಕಲಾ ನಿಕಾಯದ ಡೀನ್ ಲತಾ.ಎಂ.ಎಸ್. ಉಪ ಕುಲಸಚಿವ ಕೆ.ವೆಂಕಟೇಶ, ವಾಣಿಜ್ಯ ನಿಕಾಯ ಡೀನ್ ಪ್ರೊ.ಪಿ.ಭಾಸ್ಕರ್, ಎನ್.ಎಸ್.ಎಸ್ ಅಧಿಕಾರಿ ಜಿ.ಎಸ್.ಬಿರಾದಾರ, ರಾಯಚೂರಿನ ಪ್ರಥಮ ದರ್ಜೆ ಕಾಲೇಜಿನ ರಾಘವೇಂದ್ರ ನಾಯಕ, ವಿವಿಯ ಇಂಗ್ಲಿಷ್ ವಿಭಾಗದ ಉಪನ್ಯಾಸಕರಾದ ಅನಿಲ್ ಅಪ್ರಾಳ್, ಅನಿತಾ, ಮೊಹ್ಮದ್ ಆಸೀಫ್, ಉಪಸ್ಥಿತರಿದ್ದರು.

ಆನಂದ ಪ್ರಾಸ್ತಾವಿಕ ಮಾತನಾಡಿದರು. ಇಬ್ರಾಹಿಮ್ ಸ್ವಾಗತಿಸಿದರು, ಅರ್ಚನಾ ನಿರೂಪಿಸಿದರು, ಮಸ್ತಾನ್ ಅಲಿ, ನಾಗರಾಜ್, ರಾಜಶೇಖರ ಪರಿಚಯಿಸಿದರು. ಪ್ರಸಾದ ವಂದಿಸಿದರು,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.