ADVERTISEMENT

ಸಿಂಧನೂರು: ಮಳಿಗೆ ಗುರುತಿಸಲು ಅರ್ಜಿದಾರರು ಹೈರಾಣ!

ಡಿ.ಎಚ್.ಕಂಬಳಿ
Published 11 ಡಿಸೆಂಬರ್ 2024, 5:25 IST
Last Updated 11 ಡಿಸೆಂಬರ್ 2024, 5:25 IST
<div class="paragraphs"><p>ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಎಪಿಎಂಸಿ ವಿಸ್ತೃತ ಪ್ರಾಂಗಣದಲ್ಲಿರುವ ಮಳಿಗೆಗಳು</p></div>

ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಎಪಿಎಂಸಿ ವಿಸ್ತೃತ ಪ್ರಾಂಗಣದಲ್ಲಿರುವ ಮಳಿಗೆಗಳು

   

ಸಿಂಧನೂರು: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಮಳಿಗೆಗಳನ್ನು ಬಾಡಿಗೆ ಕೊಡಲು ಸಂಕ್ಷಿಪ್ತ ಟೆಂಡರ್ ಕರೆದು ಬಹಿರಂಗ ಹರಾಜು ಪ್ರಕಟಣೆ ಹೊರಡಿಸಿದ್ದು, ಖಾಲಿ ಇರುವ ಮಳಿಗೆಗಳನ್ನು ಗುರುತಿಸಲು ಅರ್ಜಿದಾರರು ಹೈರಾಣಾಗುತ್ತಿದ್ದಾರೆ.

ವಿಸ್ತೃತ ಮಾರುಕಟ್ಟೆ ಪ್ರಾಂಗಣದಲ್ಲಿ 16 ಚಿಕ್ಕ ಮಳಿಗೆಗಳಿದ್ದು, ಅವುಗಳಲ್ಲಿ 3 ಮತ್ತು 4 ಸಂಖ್ಯೆಯ ಮಳಿಗೆ ಬಾಡಿಗೆ ಕೊಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ಆದರೆ ಮಳಿಗೆಗಳಿಗೆ ಸಂಖ್ಯೆಗಳೇ ಇಲ್ಲ. ಇದರಂತೆ ಅದೇ ಪ್ರಾಂಗಣದಲ್ಲಿ 10 ಮಳಿಗೆಗಳಿದ್ದು, ಅದರಲ್ಲಿ 8ನೇ ಸಂಖ್ಯೆಯ ಮಳಿಗೆಯನ್ನು ಬಾಡಿಗೆ ಕೊಡುವುದಾಗಿ ಪ್ರಕಟಿಸಲಾಗಿದೆ. ಆದರೆ ಮಳಿಗೆಗಳಿಗೆ ಸಂಖ್ಯೆಗಳನ್ನು ಬರೆದಿಲ್ಲ.
ಇದರಿಂದ ಅರ್ಜಿ ಹಾಕುವುದಕ್ಕೂ ತೊಂದರೆಯಾಗಿದೆ ಎಂದು ಅರ್ಜಿದಾರರಾದ ಶರಣಪ್ಪ, ಖಾಜಾಹುಸೇನ್ ಮತ್ತಿತರರು ಹೇಳಿದ್ದಾರೆ.

ಇದೇ ರೀತಿ ಇನ್ನೂ ಹಲವಾರು ಮಳಿಗೆಗಳನ್ನು ಟೆಂಡರ್ ಕಂ. ಬಹಿರಂಗ ಹರಾಜು ಮೂಲಕ ಪ್ರತಿ 11 ತಿಂಗಳಿಗೊಮ್ಮೆ ನವೀಕರಿಸುವ ಷರತ್ತಿಗೊಳಪಟ್ಟು ಗರಿಷ್ಠ 55 ತಿಂಗಳ ಅವಧಿಗೆ ಲೀಸ್‌ ಮತ್ತು ಲೈಸೆನ್ಸ್ ಆಧಾರದ ಮೇಲೆ ಹಂಚಿಕೆ ಮಾಡುವುದಾಗಿ ತಿಳಿಸಿರುವ ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿಯವರು ಮಳಿಗೆಗಳಿಗೆ ಸಂಖ್ಯೆಗಳನ್ನು ಬರೆಸಬೇಕು ಎಂದು ಅರ್ಜಿದಾರರು ಒತ್ತಾಯಿಸಿದ್ದಾರೆ.

ಅರ್ಜಿದಾರರಿಗೆ ಉಂಟಾಗಿರುವ ಸಮಸ್ಯೆ ಕುರಿತು ಎಪಿಎಂಸಿ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಮಳಿಗೆಗಳಿಗೆ ಸಂಖ್ಯೆ ಬರೆದು ಹಲವು ವರ್ಷಗಳಾದ್ದರಿಂದ ಮಾಸಿರಬಹುದು. ಅರ್ಜಿದಾರರು ಕಚೇರಿಗೆ ಬಂದು ಕೇಳಿದರೆ ಬಾಡಿಗೆಗೆ ಕೊಡಬೇಕಾದ ಮಳಿಗೆಗಳನ್ನು ಖುದ್ದಾಗಿ ತೋರಿಸುವುದಾಗಿ
ಪ್ರತಿಕ್ರಿಯಿಸಿದರು.

ಈ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ವರ್ತಕರು ಹಾಗೂ ಜನರು ಎಚ್ಚರಿಕೆ ನೀಡಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.