ಸಿಂಧನೂರು: ನಗರದ ವನಸಿರಿ ಫೌಂಡೇಷನ್ ಸಂಸ್ಥಾಪಕ ಅಮರೇಗೌಡ ಮಲ್ಲಾಪುರ ಅವರಿಗೆ ಮುದಗಲ್ ಸಮೀಪದ ತಿಮ್ಮಾಪುರ ಗ್ರಾಮದ ಮಹಾಂತೇಶ್ವರ ಮಠದಲ್ಲಿ ರಾಜ್ಯಮಟ್ಟದ ಸೇವಾಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಮಹಾಂತ ಸ್ವಾಮೀಜಿ ಸೇರಿದಂತೆ ಅನೇಕ ಶ್ರೀಗಳು, ಶಾಸಕರು ಈ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ವನಸಿರಿ ಫೌಂಡೇಷನ್ ಸ್ಥಾಪಿಸಿ ಪರಿಸರ ಪ್ರಜ್ಞೆಯನ್ನು ಜನಮಾನಸದಲ್ಲಿ ಬಿತ್ತುವುದರ ಮೂಲಕ ವೃಕ್ಷ ರಕ್ಷಕರಾಗಿ ಶ್ರಮಿಸುತ್ತಿರುವ ಸೇವೆ ಗುರುತಿಸಿ ಕಲ್ಯಾಣಾಶ್ರಮದ ಜನಮನ ಕಲ್ಯಾಣ ಜಾತ್ರೆ, ಶರಣ ಸಂಸ್ಕೃತಿ ಮೇಳ ಹಾಗೂ ವಚನ ಪಲ್ಲಕ್ಕಿ ಮಹೋತ್ಸವದಲ್ಲಿ ಅಮರೇಗೌಡ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.