ಸಿರವಾರ: ರೈತಾಪಿ ವರ್ಗಕ್ಕೆ ಬೆನ್ನೆಲುಬಾಗಿರುವ ಎತ್ತುಗಳನ್ನು ಮಣ್ಣಿನ ಮೂರ್ತಿಗಳಾಗಿ ಮಾಡಿ ಮಣ್ಣೆತ್ತಿನ ಅಮವಾಸ್ಯೆಯ ದಿನ ಪೂಜೆ ಸಲ್ಲಿಸಲು ರೈತರನ್ನು ಪಿಒಪಿಯಿಂದ ಮಾಡಿದ ಬಣ್ಣ ಬಣ್ಣದ ಎತ್ತಿನ ಮೂರ್ತಿಗಳು ಮಾರುಕಟ್ಟೆಯಲ್ಲಿ ಆಕರ್ಷಿಸುತ್ತಿವೆ.
ರೈತರು ತಮ್ಮ ಹೊಲದಲ್ಲಿನ ಎರೆಮಣ್ಣಿನಿಂದ ಎತ್ತುಗಳ ಮೂರ್ತಿಗಳನ್ನು ಮಾಡಿ ಅಮಾವಾಸ್ಯೆಯ ದಿನ ಪೂಜಿಸಿ ನಂತರ ಮನೆಯ ಮಾಳಿಗೆಯ ಮೇಲೆ ಇಟ್ಟ ನಂತರ ಮಳೆಯಿಂದ ಎತ್ತಿನ ಮೂರ್ತಿಗಳು ಎಷ್ಟು ಬೇಗ ಕರಗುತ್ತವೆಯೋ ಅಷ್ಟು ಸಮೃದ್ದಿ ಮಳೆ ವರ್ಷವಿಡಿ ಉತ್ತಮ ಮಳೆ ಆಗುತ್ತದೆ ಎಂಬುದು ರೈತರ ನಂಬಿಕೆ.
ಪಿಒಪಿ ಮೂರ್ತಿಗಳಿಗೆ ಹೆಚ್ಚಿದ ಬೇಡಿಕೆ : ಮಾರುಕಟ್ಟೆಯಲ್ಲಿ ಹತ್ತಾರು ವ್ಯಾಪಾರಸ್ಥರು ರಸ್ತೆ ಬದಿಯಲ್ಲಿ ಅಂಗಡಿಗಳನ್ನು ಎತ್ತಿನ ಮೂರ್ತಿಗಳ ಮಾರಾಟಕ್ಕಾಗಿ ತೆರೆದಿದ್ದು, ಮಣ್ಣಿನ ಎತ್ತುಗಳಿಗಿಂತ ಪಿಒಪಿ ಯಿಂದ ಮಾಡಿದ ಎತ್ತಿನ ಮೂರ್ತಿಗಳು ಆಕರ್ಷಿಸುತ್ತಿದ್ದು, ಒಂದು ಜೊತೆ ಎತ್ತುಗಳಿಗೆ ₹50 ಯಿಂದ ಅಳತೆಗೆ ತಕ್ಕಂತೆ ಪ್ರಾರಂಭವಾಗಿ ₹ 1500 ರವೆರೆಗೂ ಮಾರಾಟ ಮಾಡಲಾಗುತ್ತಿದೆ.
ರೈತರ ಕುಟುಂಬಗಳು ಬಣ್ಣ ಬಣ್ಣದ ಮೂರ್ತಿಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದು ಮಣ್ಣಿನ ಎತ್ತುಗಳಿಗೆ ಬೇಡಿಕೆ ಕಡಿಮೆಯಾಗಿದೆಅಮರೇಶ ಕುಂಬಾರ್ ಎತ್ತಿನ ಮೂರ್ತಿಗಳ ವ್ಯಾಪಾರಿ
ಇಂದಿನ ಮಕ್ಕಳ ಆಸೆಗಾಗಿ ಪಿಒಪಿ ಎತ್ತುಗಳನ್ನು ಖರೀದಿಸಿದರೂ ಅಮವಾಸ್ಯೆಯ ದಿನ ಮಣ್ಣಿನಿಂದ ಮಾಡಿದ ಮೂರ್ತಿಗಳನ್ನು ಪೂಜೆ ಮಾಡುತ್ತೇವೆರಾಜಪ್ಪ ಸಿರವಾರ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.