ADVERTISEMENT

ರಾಯಚೂರು: ವಿರಾಟ ಹಿಂದೂ ಸಮ್ಮೇಳನ; ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 6:35 IST
Last Updated 23 ಫೆಬ್ರುವರಿ 2026, 6:35 IST
ಸಿರವಾರದಲ್ಲಿ ಶನಿವಾರ ವಿರಾಟ ಹಿಂದೂ ಸಮ್ಮೇಳನದ ಅಂಗವಾಗಿ ಶೋಭಾಯಾತ್ರೆ ನಡೆಯಿತು
ಸಿರವಾರದಲ್ಲಿ ಶನಿವಾರ ವಿರಾಟ ಹಿಂದೂ ಸಮ್ಮೇಳನದ ಅಂಗವಾಗಿ ಶೋಭಾಯಾತ್ರೆ ನಡೆಯಿತು   

ಸಿರವಾರ: ಪಟ್ಟಣದಲ್ಲಿ ವಿರಾಟ ಹಿಂದೂ ಸಮ್ಮೇಳನದ ಅಂಗವಾಗಿ ಶನಿವಾರ ಅದ್ದೂರಿಯಾಗಿ ಶೋಭಾಯಾತ್ರೆ ನಡೆಯಿತು.

ಪಟ್ಟಣದ ಬಸವೇಶ್ವರ ವೃತ್ತದಿಂದ ಬಸ್ ನಿಲ್ದಾಣದ ಕಾರ್ಯಕ್ರಮದ ಸ್ಥಳದವರೆಗೆ 101 ಮಹಿಳೆಯರ ಕಳಸ, ಡೊಳ್ಳು ಕುಣಿತ, ಕಣಿ ಹಲಿಗೆ ಕುಣಿತ, ಕುದುರೆ ಕುಣಿತೊಂದಿಗೆ ಅದ್ದೂರಿಯಾಗಿ ನಡೆಯಿತು
ಶೋಭಾಯಾತ್ರೆಯಲ್ಲಿ ಪಟ್ಟಣದಲ್ಲಿರುವ 35 ಕ್ಕೂ ಹೆಚ್ಚು ವಿವಿಧ ಮಹಾನೀಯರ ನಾಮಫಲಕ, ದೇವಸ್ಥಾನಗಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು.

ಕವಿತಾಳ ಕಲ್ಮಠದ ಅಭಿವನ ಸಿದ್ದಲಿಂದ ಸ್ವಾಮೀಜಿ ಮತ್ತು ನೀಲಗಲ್ ಬೃಹನ್ಮಠದ ರೇಣುಕಾ ಶಾಂತಮಲ್ಲಾ ಶಿವಾಚಾರ್ಯರು ಶೋಭಾಯಾತ್ರೆಗೆ ಚಾಲನೆ ನೀಡಿದರು.

ADVERTISEMENT

ವಿವಿಧ ಮಹಾನೀಯರ ಛದ್ಮವೇಶ ಧರಿಸಿದ ವಿದ್ಯಾರ್ಥಿಗಳು, ಮಾಜಿ ಸಂಸದ ಬಿ.ವಿ.ನಾಯಕ, ಜೆ.ಶಿವರಾಮರೆಡ್ಡಿ, ಜೆ.ದೇವರಾಜಗೌಡ, ಕೃಷ್ಣನಾಯಕ, ಶರಣಗೌಡ ಜಂಬಲದಿನ್ನಿ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ರಮೇಶ ಚಿಂಚರಕಿ, ರಮೇಶ ಶೆಟ್ಟಿ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು,  ಯುವಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.