ADVERTISEMENT

ವಿದ್ಯುತ್ತಿಗೆ ಪರ್ಯಾಯವಾಗಿ ಸೌರಶಕ್ತಿ ಬಳಸಿ: ಕೃಷಿ ವಿವಿ ಕುಲಪತಿ ಹನುಮಂತಪ್ಪ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 5:57 IST
Last Updated 4 ಡಿಸೆಂಬರ್ 2025, 5:57 IST
<div class="paragraphs"><p>ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸೆಲ್ಕೊ ಫೌಂಡೆಷನ್‌ಗಳ ಸಹಯೋಗದಲ್ಲಿ ಬುಧವಾರ ಆರಂಭವಾದ ‘ವಿಕಾಸಿನಿ’ ಸೌರ ವಿದ್ಯುತ್ ಉಪಕರಣ ಪ್ರದರ್ಶನ ಹಾಗೂ ಮಾಹಿತಿ ಕಾರ್ಯಾಗಾರವನ್ನು ಕುಲಪತಿ .ಹನುಮಂತಪ್ಪ ಉದ್ಘಾಟಿಸಿದರು. </p></div>

ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸೆಲ್ಕೊ ಫೌಂಡೆಷನ್‌ಗಳ ಸಹಯೋಗದಲ್ಲಿ ಬುಧವಾರ ಆರಂಭವಾದ ‘ವಿಕಾಸಿನಿ’ ಸೌರ ವಿದ್ಯುತ್ ಉಪಕರಣ ಪ್ರದರ್ಶನ ಹಾಗೂ ಮಾಹಿತಿ ಕಾರ್ಯಾಗಾರವನ್ನು ಕುಲಪತಿ .ಹನುಮಂತಪ್ಪ ಉದ್ಘಾಟಿಸಿದರು.

   

ರಾಯಚೂರು: ‘ಸೌರಶಕ್ತಿ ಹಾಗೂ ಪವನ ಶಕ್ತಿಯನ್ನು ವಿದ್ಯುತ್ತಿಗೆ ಪರ್ಯಾಯವಾಗಿ ಶಕ್ತಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ’ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಹನುಮಂತಪ್ಪ ಹೇಳಿದರು.

ಇಲ್ಲಿಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸೆಲ್ಕೊ ಫೌಂಡೆಷನ್‌ಗಳ ಸಹಯೋಗದಲ್ಲಿ ಬುಧವಾರ ಆರಂಭವಾದ ‘ವಿಕಾಸಿನಿ’ ಸೌರ ವಿದ್ಯುತ್ ಉಪಕರಣ ಪ್ರದರ್ಶನ ಹಾಗೂ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಜನಸಂಖ್ಯೆ ಹೆಚ್ಚುತ್ತಿರುವ ಕಾರಣ ವಿದ್ಯುತ್ತಿನ ಬೇಡಿಕೆ ಹೆಚ್ಚುತ್ತಲೇ ಇದೆ. ಇದರ ಜತೆಗೆ ವಿದ್ಯುತ್ ಸಮಸ್ಯೆಗಳೂ ಅಧಿಕವಾಗುತ್ತಿದೆ. ಪೆಟ್ರೋಲ್‌ ಹಾಗೂ ಡಿಸೇಲ್‌ನಿಂದ ಪರಿಸರ ಮಾಲಿನ್ಯವಾಗುತ್ತಿದೆ. ಈ ಎಲ್ಲ ಸಮಸ್ಯೆಗಳಿಗೆ ಸೌರಶಕ್ತಿ ಹಾಗೂ ಪವನಶಕ್ತಿ ಬಳಕೆ ಪರ್ಯಾಯವಾಗಿದೆ’ ಎಂದು ತಿಳಿಸಿದರು.

‘ಸೆಲ್ಕೊ ಕಂಪನಿ ಅನೇಕ ಉಪಕರಣಗಳಲ್ಲಿ ಸೌರಫಲಕ ಅಳವಡಿಸಿ ಸೌರಶಕ್ತಿ ಬಳಸಲು ಆರಂಭಿಸಿದೆ. 3 ಎಚ್‌ಪಿಯಿಂದ 7 ಎಚ್‌ಪಿ ವರೆಗೆನ ಮೋಟರ್‌ಗಳಿಗೂ ಸೌರಶಕ್ತಿ ಬಳಸಬಹುದಾಗಿದೆ. ಇದು ರೈತರಿಗೆ ಹೆಚ್ಚು ಉಪಯುಕ್ತವಾಗಿದೆ‘ ಎಂದು ಹೇಳಿದರು.

‘ಕೃಷಿ ಎಂಜಿನಿಯರಿಂಗ್‌ ಕಾಲೇಜಿನ ಮೇಲೆ ಸೌರಫಲಕ ಅಳವಡಿಸಿ ಇಡೀ ಕ್ಯಾಂಪಸ್‌ಗೆ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಕ್ಯಾಂಪಸ್‌ನಲ್ಲಿ ವಿದ್ಯುತ್ತಿನ ಸಮಸ್ಯೆಯೇ ಎದುರಾಗಿಲ್ಲ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸೆಲ್ಕೊ ಫೌಂಡೇಷನ್‌ ಹಿರಿಯ ಯೋಜನಾ ನಿರ್ದೇಶಕಿ ಸುರಭಿ ರಾಜಗೋಪಾಲ ಮಾತನಾಡಿ, ‘ಸ್ವಸಹಾಯ ಗುಂಪುಗಳ ಮಹಿಳೆಯರು, ಅಂಗವಿಕಲರು ಹಾಗೂ ರೈತರಿಗೆ ಜೀವನೋಪಾಯದ ಮಾಹಿತಿ ಒದಗಿಸುವುದು ಪ್ರದರ್ಶನದ ಮುಖ್ಯ ಉದ್ದೇಶವಾಗಿದೆ. ಕಾರ್ಯಾಗಾರದಲ್ಲಿ ಸೋಲಾರ್ ಉಪಕರಣಗಳಿಗೆ ಸರ್ಕಾರದಿಂದ ಲಭಿಸುವ ರಿಯಾಯಿತಿ, ಬ್ಯಾಂಕ್‌ಗಳ ಸಾಲ ಸೌಲಭ್ಯ, ಮಾರುಕಟ್ಟೆ, ಮಾರಾಟ ವ್ಯವಸ್ಥೆಯ ಕುರಿತು ಮಾಹಿತಿ ಒದಗಿಸಲಾಗುತ್ತಿದೆ’ ಎಂದು ತಿಳಿಸಿದರು.

ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಜಿ.ಯು.ಹುಡೇದ, ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಈ.ಅಮರೇಗೌಡ, ಕೃಷಿ ಎಂಜಿನಿಯರಿಂಗ್‌ ಕಾಲೇಜಿನ ಡೀನ್ ಎಂ.ಎಸ್.ಅಯ್ಯನಗೌಡರ, ಸಂಜೀವಿನಿ ಪ್ರಾದೇಶಿಕ ಸಂಘಟನೆಯ ಅಧ್ಯಕ್ಷೆ ಡಿ.ಶರಣಮ್ಮ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಶರಣಬಸಪ್ಪ, ಸೆಲ್ಕೊ ಫೌಂಡೇಷನ್ ಸಂತೋಷಕುಮಾರ, ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಎ.ಆರ್.ಕುರುಬರ ಉಪಸ್ಥಿತರಿದ್ದರು.

‘ಗ್ರಾಮೀಣ ಭಾಗದ ಮಹಿಳೆಯರು ಸ್ವಗ್ರಾಮಗಳಲ್ಲೇ ಉದ್ಯೋಗ ಸೃಷ್ಟಿಸುವ ಅವಕಾಶಗಳ ಮಾಹಿತಿ ಒದಗಿಸಲಾಗಿದೆ. ಇದರಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಅನುಕೂಲವಾಗಲಿದೆ‘ ಎಂದು ತಿಳಿಸಿದರು.

ಸೆಲ್ಕೊ ಫೌಂಡೇಷನ್ ಯೋಜನಾ ವ್ಯವಸ್ಥಾಪಕ ಫಣೀಂದ್ರ ಸಿಂಗ್ ಸ್ವಾಗತಿಸಿದರು. ಕವಿತಾ ಭರತ ನಿರೂಪಿಸಿದರು. ಅರ್ಪಿತಾ ಹಾಗೂ ನಂದಿನಿ ಪ್ರಾರ್ಥನೆ ಗೀತೆ ಹಾಡಿದರು. ಕೃಷಿ ವಿವಿ ಪ್ರೊ.ವಿಜಯಕುಮಾರ ಪಲ್ಲೇದ ವಂದಿಸಿದರು

ಕರ್ನಾಟಕ ಗ್ರಾಮೀಣ ಜೀವನೋಪಾಯ ಅಭಿಯಾನ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ, ರಾಯಚೂರು ಮಹಾನಗರ ಪಾಲಿಕೆ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಪ್ರದರ್ಶನ ಆಯೋಜಿಸಲಾಗಿದೆ.

ಹೊಸ ಅವಿಷ್ಕಾರ ಹಾಗೂ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಲ್ಲಿ ಕೌಶಲ ಹೆಚ್ಚಿಸುವ ದಿಸೆಯಲ್ಲಿ ಸೆಲ್ಕೊದೊಂದಿಗೆ ಎಂಒಯು ಮಾಡಿಕೊಳ್ಳುವುದು ಉಪಯುಕ್ತ
-ಎಂ.ಎಸ್.ಅಯ್ಯನಗೌಡರ, ಕೃಷಿ ಎಂಜಿನಿಯರಿಂಗ್‌ ಕಾಲೇಜಿನ ಡೀನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.