ADVERTISEMENT

ಸಿಂಧನೂರು | ‘ಸಹಕಾರ ಸಂಘಗಳಿಗೆ ಮರಣ ಶಾಸನ’

ಸಂಯುಕ್ತ ಸಹಕಾರಿಯ ಮಾಜಿ ಅಧ್ಯಕ್ಷ ಗುರುನಾಥ ಜಾಂತೇಕರ್ ಕಳವಳ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 6:07 IST
Last Updated 11 ಅಕ್ಟೋಬರ್ 2025, 6:07 IST
ಸಿಂಧನೂರಿನ ಟೌನ್‍ಹಾಲ್‍ನಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ ಬೆಂಗಳೂರು ಮತ್ತು ಪ್ರಾಂತೀಯ ಕಚೇರಿ ಕಲಬುರಗಿ ಅವರ ಜಂಟಿ ಆಶ್ರಯದಲ್ಲಿ ಸೌಹಾರ್ದ ಸಹಕಾರಿಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಕಾರ್ಯನಿರ್ವಾಹಕರೊಂದಿಗೆ 2025ರ ಸಹಕಾರಿ ಕಾಯ್ದೆ ತಿದ್ದುಪಡಿಯ ಸಮಾಲೋಚನಾ ಸಭೆಗೆ ಶುಕ್ರವಾರ ಚಾಲನೆ ನೀಡಲಾಯಿತು
ಸಿಂಧನೂರಿನ ಟೌನ್‍ಹಾಲ್‍ನಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ ಬೆಂಗಳೂರು ಮತ್ತು ಪ್ರಾಂತೀಯ ಕಚೇರಿ ಕಲಬುರಗಿ ಅವರ ಜಂಟಿ ಆಶ್ರಯದಲ್ಲಿ ಸೌಹಾರ್ದ ಸಹಕಾರಿಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಕಾರ್ಯನಿರ್ವಾಹಕರೊಂದಿಗೆ 2025ರ ಸಹಕಾರಿ ಕಾಯ್ದೆ ತಿದ್ದುಪಡಿಯ ಸಮಾಲೋಚನಾ ಸಭೆಗೆ ಶುಕ್ರವಾರ ಚಾಲನೆ ನೀಡಲಾಯಿತು   

ಸಿಂಧನೂರು: ‘ರಾಜ್ಯ ಸರ್ಕಾರ ಸಹಕಾರಿ ಕಾಯ್ದೆಯನ್ನು ತಿದ್ದುಪಡಿ ಮಾಡಿರುವುದು ಸೌಹಾರ್ದ ಸಹಕಾರಿ ಸಂಘಗಳಿಗೆ ಮರಣ ಶಾಸನವಾಗಿದೆ’ ಎಂದು ರಾಜ್ಯ ಸಂಯುಕ್ತ ಸಹಕಾರಿಯ ಮಾಜಿ ಅಧ್ಯಕ್ಷ ಗುರುನಾಥ ಜಾಂತೇಕರ್ ತೀವ್ರ ಕಳವಳ ವ್ಯಕ್ತಪಡಿಸಿದರು.

ಗರದ ಟೌನ್‍ಹಾಲ್‍ನಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ ಬೆಂಗಳೂರು ಪ್ರಾಂತೀಯ ಕಚೇರಿ ಕಲಬುರಗಿ ಅವರ ಜಂಟಿ ಆಶ್ರಯದಲ್ಲಿ ಸೌಹಾರ್ದ ಸಹಕಾರಿಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಕಾರ್ಯನಿರ್ವಾಹಕರೊಂದಿಗೆ 2025ರ ಸಹಕಾರಿ ಕಾಯ್ದೆ ತಿದ್ದುಪಡಿಯ ಸಮಾಲೋಚನಾ ಸಭೆಯಲ್ಲಿ ಶುಕ್ರವಾರ ಅವರು ಮಾತನಾಡಿದರು.

ಸಹಕಾರಿ ಸಂಘಗಳ ನಿರ್ದೇಶಕರು ಆಸ್ತಿ ಘೋಷಣೆ ಮಾಡುವುದು, ಸೌಹಾರ್ದ ಸಹಕಾರಿಗಳ ಮೀಸಲು ನಿಧಿಯನ್ನು ಡಿಸಿಸಿ ಅಥವಾ ಅಪೆಕ್ಸ್ ಬ್ಯಾಂಕ್‍ನಲ್ಲಿ ಠೇವಣಿ ಇಡುವಂತೆ ಪ್ರಸ್ತಾಪಿಸಲಾಗಿದೆ. ಆದರೆ, ಈ ಬ್ಯಾಂಕ್‌ನಲ್ಲಿ ಠೇವಣಿ ಇಡುವುದು ಎಷ್ಟರಮಟ್ಟಿಗೆ ಸುರಕ್ಷಿತ ಎನ್ನುವುದರ ಬಗ್ಗೆ ಸರ್ಕಾರ ಗಮನಹರಿಸದಿರುವುದು ಶೋಚನೀಯ. ಪ್ರತಿ ಮೂರು ವರ್ಷಕ್ಕೊಮ್ಮೆ ಸಹಕಾರಿ ಸಂಘಗಳನ್ನು ಲೆಕ್ಕ ಪರಿಶೋಧನೆ ಇಲಾಖೆಯಿಂದ ಪರಿಶೋಧನೆ ಮಾಡುವ ಉದ್ದೇಶದ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ಭ್ರಷ್ಟಾಚಾರಕ್ಕೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಕಳೆದ 25 ವರ್ಷಗಳ ಹಿಂದೆ ಸಹಕಾರಿ ಸಂಘಗಳು ರಾಜಕಾರಣಿಗಳು ಮತ್ತು ಅಧಿಕಾರಿಗಳ ದುರುಪಯೋಗ ಕೃತ್ಯದಿಂದ ಸಹಕಾರಿ ಸಂಘಗಳಿಗೆ ಗಮನಾರ್ಹವಾದ ಹಿನ್ನಡೆಯಾಗಿತ್ತು. ಸೌಹಾರ್ದ ಕಾಯ್ದೆ ಜಾರಿಯಾದ ನಂತರ ಸಹಕಾರಿ ಚಳವಳಿ ಪುನಶ್ಚೇತನಗೊಂಡಿತ್ತು. ಈಗ ಪುನಃ ಸರ್ಕಾರ ಹಿಂದಿನ ಸ್ಥಿತಿಗೆ ಕೊಂಡೊಯ್ಯಲು ಪ್ರಯತ್ನಿಸುತ್ತಿದೆ ಎಂದು ಅಪಾದಿಸಿದರು.

ನಿರ್ದೇಶಕ ಆರ್.ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಎಚ್.ಜಿ. ಹನುಮಂತಯ್ಯಶೆಟ್ಟಿ, ಶ್ರೀಧರ ಕೆಸರಟ್ಟಿ, ಗಂಗಾವತಿ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಸ್ಕಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಆರ್‌ಡಿಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಬಿ.ರಾಜಶೇಖರ, ಮಂಜುಳಾ ಪಾಟೀಲ ಮಾತನಾಡಿದರು.

ರಾಜ್ಯ ಸಂಯುಕ್ತ ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.

ಕಲಬುರಗಿ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಎಸ್.ಎಸ್.ಪಾಟೀಲ್, ಕೊಪ್ಪಳ ಜಿಲ್ಲಾ ಅಧ್ಯಕ್ಷ ಕಡ್ಡಿಪುಡಿ ಚನ್ನಪ್ಪ, ರಾಯಚೂರು ಜಿಲ್ಲಾ ಒಕ್ಕೂಟದ ನಿರ್ದೇಶಕರು ಉಪಸ್ಥಿತರಿದ್ದರು.

ಪ್ರಾಂತೀಯ ವ್ಯವಸ್ಥಾಪಕ ಸೂರ್ಯಕಾಂತ ರಾಕ್ಲೆ, ಜಿಲ್ಲಾ ಅಭಿವೃದ್ಧಿ ಅಧಿಕಾರಿಗಳಾದ ನಟರಾಜ, ಆಂಜನೇಯ, ರಾಯಚೂರು ಜಿಲ್ಲಾ ಒಕ್ಕೂಟದ ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಹುಸೇನ್‍ಸಾಬ್ ನಿರೂಪಿಸಿದರು. ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳ ಸೌಹಾರ್ದ ಸಹಕಾರಿ ಸಂಘಗಳ ಅಧ್ಯಕ್ಷರು, ಅಧಿಕಾರಿಗಳು ಭಾಗವಹಿಸಿದ್ದರು.

ಸಿಂಧನೂರಿನ ಟೌನ್‍ಹಾಲ್‍ನಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ ಬೆಂಗಳೂರು ಮತ್ತು ಪ್ರಾಂತೀಯ ಕಚೇರಿ ಕಲಬುರಗಿ ಅವರ ಜಂಟಿ ಆಶ್ರಯದಲ್ಲಿ ಶುಕ್ರವಾರ ನಡೆದ ಸೌಹಾರ್ದ ಸಹಕಾರಿಗಳ ಅಧ್ಯಕ್ಷರು ನಿರ್ದೇಶಕರು ಹಾಗೂ ಕಾರ್ಯನಿರ್ವಾಹಕರು 2025ರ ಸಹಕಾರಿ ಕಾಯ್ದೆ ತಿದ್ದುಪಡಿಯ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿರುವುದು

ಸಹಕಾರಿಯಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲ ಹೊಸ ಕಾಯ್ದೆಯಿಂದ ಸಹಕಾರಿ ಚಳವಳಿಗೆ ಹಿನ್ನಡೆ ಆರ್ಥಿಕ ಕ್ಷೇತ್ರದಲ್ಲಿ ಸಹಕಾರಿಯಿಂದ ಪ್ರಗತಿ

ಸೌಹಾರ್ದ ಸಹಕಾರಿ ಸಂಘಗಳಲ್ಲಿ ರಾಜ್ಯ ಸರ್ಕಾರ ಎಲ್ಲ ವಿಧದಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನ ನಡೆಸಿದೆ. ನ್ಯಾಯಾಲಯದ ಮೊರೆ ಹೋಗುವ ಮೂಲಕ ಸಹಕಾರಿ ಕ್ಷೇತ್ರ ಉಳಿಸಬೇಕಾಗಿದೆ 
ಕೆ.ವಿರೂಪಾಕ್ಷಪ್ಪ ಮಾಜಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.