ರಾಯಚೂರು: ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸ ನೆರವೇರುತ್ತಿರುವ ಪ್ರಯುಕ್ತ ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ವಿಶೇಷ ದೀಫೋತ್ಸವ ಪೂಜೆ ಮಾಡಿದರು.
ಸುವರ್ಣ ರಾಮದೇವರ ಮೂರ್ತಿಯನ್ನು ರಜತ ಸಿಂಹಾಸನದಲ್ಲಿ ಇರಿಸಿ, ದೀಪೋತ್ಸವ ಪೂಜೆ ನೆರವೇರಿಸಿದರು. ಆಂಧ್ರಪ್ರದೇಶದಲ್ಲೆಡೆ ಕೋವಿಡ್ ವ್ಯಾಪಕ ಆಗಿರುವುದರಿಂದ ಮಠದೊಳಗೆ ಭಕ್ತರಿಗೆ ಇನ್ನೂ ಪ್ರವೇಶಾವಕಾಶ ನೀಡಿಲ್ಲ. ಹೀಗಾಗಿ ಪೂಜಾ ವಿಧಿವಿಧಾನಗಳನ್ನು ಆನ್‌ಲೈನ್ ಮೂಲಕವೇ ಭಕ್ತರು ಕಣ್ತುಂಬಿಕೊಳ್ಳಲು ಅವಕಾಶ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.