ADVERTISEMENT

ಕ್ರೀಯಾಶೀಲ ಬದುಕಿಗೆ ಕ್ರೀಡೆ ಮುಖ್ಯ: ಜ್ಯೋತಿ ಧಮ್ಮ ಪ್ರಕಾಶ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 8:17 IST
Last Updated 7 ಡಿಸೆಂಬರ್ 2025, 8:17 IST
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ 2025-26 ನೇ ಸಾಲೀನ ತೃತೀಯ ಅಂತರ ಮಹಾವಿದ್ಯಾಲಯಗಳ (ಪುರುಷ ಮತ್ತು ಮಹಿಳಾ) ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಪ್ರಶಸ್ತಿ ಗೆದ್ದ ಕ್ರೀಡಾಪಟುಗಳು
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ 2025-26 ನೇ ಸಾಲೀನ ತೃತೀಯ ಅಂತರ ಮಹಾವಿದ್ಯಾಲಯಗಳ (ಪುರುಷ ಮತ್ತು ಮಹಿಳಾ) ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಪ್ರಶಸ್ತಿ ಗೆದ್ದ ಕ್ರೀಡಾಪಟುಗಳು   

ರಾಯಚೂರು: ‘ಯುವ ಜನತೆ ಇಂದಿನ ಕೃತಕ ಬುದ್ಧಿಮತ್ತೆ ಕಾಲದಲ್ಲಿ ಕೇವಲ ಮೊಬೈಲ್ ಬಳಕೆಗೆ ಮೊರೆ ಹೋಗಿ ದೈಹಿಕ ಚಟುವಟಿಕೆಗಳನ್ನು ಅಲಕ್ಷಿಸಿದರೆ ಆರೋಗ್ಯ ಕ್ಷೀಣಿಸುತ್ತದೆ. ಕ್ರೀಡೆಯಿಂದ ದೈಹಿಕ ಕ್ಷಮತೆಯೊಂದಿಗೆ ನಾವು ಆರೋಗ್ಯವಾಗಿ ಕ್ರೀಯಾಶೀಲ ಬದುಕು ಸಾಗಿಸಲು ಸಾಧ್ಯವಾಗುತ್ತದೆ’ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಸಚಿವ (ಮೌಲ್ಯಮಾಪನ) ಜ್ಯೋತಿ ಧಮ್ಮ ಪ್ರಕಾಶ ಅಭಿಪ್ರಾಯಪಟ್ಟರು.

ವಿ.ಆರ್.ಇ.ಟಿ. ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿಆಯೋಜಿಸಿದ್ದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ 2025-26 ನೇ ಸಾಲೀನ ತೃತೀಯ ಅಂತರ ಮಹಾವಿದ್ಯಾಲಯಗಳ (ಪುರುಷ ಮತ್ತು ಮಹಿಳಾ) ಅಥ್ಲೆಟಿಕ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಿವಿ ವ್ಯಾಪ್ತಿಯ ದೈಹಿಕ ಶಿಕ್ಷಣ ನಿರ್ದೇಶಕರ ಮಾರ್ಗದರ್ಶನದೊಂದಿಗೆ ಉತ್ತಮ ಕ್ರೀಡಾಪಟುಗಳಾಗಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಮ್ಮ ವಿಶ್ವವಿದ್ಯಾಲಯಕ್ಕೆ ಕೀರ್ತಿ ತರಬೇಕು’ ಎಂದು ಶುಭಹಾರೈಸಿದರು.

ADVERTISEMENT

ಕೃಷಿ ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ರಾಜಣ್ಣ ಮಾತನಾಡಿ, ‘ಕ್ರೀಡಾಪಟುಗಳು ವಾಲ್ಮೀಕಿ ವಿಶ್ವವಿದ್ಯಾಲಯಕ್ಕೆ ಕೀರ್ತಿತರಬೇಕು. ದಿನಕ್ಕೊಂದು ಗಂಟೆ ವ್ಯಾಯಾಮ, ದಿನವೆಲ್ಲಾ ದೇಹಕ್ಕೆ ಆರಾಮ’ ಎಂದು ಅವರು ಹೇಳಿದರು.

ವಕೀಲೆ ವಿಜಯಲಕ್ಷ್ಮೀ ಪಾಸೋಡಿ, ವಿವಿಯ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕಿ ಲತಾ.ಎಂ.ಎಸ್., ವಿವಿಯ ಸಿಂಡಿಕೇಟ್ ಸದಸ್ಯ ನಾಗರತ್ನ ನಾಯಕ, ವಿವಿಯ ವಿದ್ಯಾವಿಷಯಕ ಪರಿಷತ್ ಸದಸ್ಯ ಜೆ.ಎಲ್.ಈರಣ್ಣ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ವಿರೂಪಾಕ್ಷಿ ಬೆಟಗೇರಿ, ದಾವಣಗೆರೆ ವಿವಿಯ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ನಂದೀಶ್ವರಪ್ಪ ಬಿ.ಪಿ, ವಿ.ಆರ್.ಇ.ಟಿ ಸಂಸ್ಥೆಯ ಅಧ್ಯಕ್ಷೆ ಮಹಾದೇವಿ ಪಾಸೋಡಿ, ವಿವಿಯ ನಿವೃತ್ತ ದೈ.ಶಿ ನಿರ್ದೇಶಕ ವಾಸುದೇವ ಜೇವರ್ಗಿ ಮಾತನಾಡಿದರು.

ದೇವದುರ್ಗ ಜಿಎಫ್‍ಜಿಸಿಯ ಡಾ.ಸುಭಾಷ್ ಚಂದ್ರ ಪಾಟೀಲ, ಪ್ರಾಂಶುಪಾಲ ರೂಡ್ಸ್ ಕಾಲೇಜ್‍ನ ಕೆಂಪಣ್ಣ, ಇನ್‍ಫ್ಯಾಂಟ್ ಜೀಸಸ್ ಕಾಲೇಜ್‍ನ ಭೀಮಣ್ಣ, ವಿವಿಯ ದೈ.ಶಿ ಮತ್ತು ಕ್ರೀಡಾ ವಿಭಾಗದ ಸಂಯೋಜಕ ಮಲ್ಲಿಕಾರ್ಜುನ ಎನ್. ವೇದಿಕೆ ಉಪಸ್ಥಿತರಿದ್ದರು.

ರಾಜಶೇಖರ ಪಾಸೋಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು, ಪ್ರಸನ್ನ ನಿರೂಪಿಸಿದರು, ನಾಗರೆಡ್ಡಿ ಪರಿಚಯ ಮಾಡಿದರು, .ಶಿವು.ಕೆ ವಂದಿಸಿದರು.

2025-26 ನೇ ಸಾಲೀನ ತೃತೀಯ ಅಂತರ ಮಹಾವಿದ್ಯಾಲಯಗಳ (ಪುರುಷ ಮತ್ತು ಮಹಿಳಾ) ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಸಮಗ್ರ ವೀರಾಗ್ರಹಿಣಿ ಪ್ರಶಸ್ತಿಯನ್ನು ಪುರುಷ ವಿಭಾಗದಲ್ಲಿ ಮಾನ್ವಿಯ ಜಿಎಫ್‍ಜಿಸಿ ಪಡೆದರೆ, ಮಹಿಳಾ ವಿಭಾಗದಲ್ಲಿ ಹಾಗೂ ಮಹಿಳಾ ಮತ್ತು ಪುರುಷ ವಿಭಾಗದಲ್ಲಿ ಒಟ್ಟುಗೂಡಿ ಸಮಗ್ರ ವೀರಾಗ್ರಹಿಣಿ ಪ್ರಶಸ್ತಿಯನ್ನು ರಾಯಚೂರಿನ ವಿಆರ್‍ಇಟಿ ಕಾಲೇಜು ಪಡೆಯಿತು.

ಈ ಸಂದರ್ಭದಲ್ಲಿ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಪಾರಿತೋಷಕ ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.