ADVERTISEMENT

ಅರಕೇರಾ: ಸೂಗೂರೇಶ್ವರ ಸಂಭ್ರಮದ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 7:08 IST
Last Updated 28 ನವೆಂಬರ್ 2025, 7:08 IST
ಅರಕೇರಾ ಪಟ್ಟಣದ ಸೂಗೂರೇಶ್ವರ ರಥೋತ್ಸವ ಗುರುವಾರ ಅದ್ದೂರಿಯಾಗಿ ಜರುಗಿತು
ಅರಕೇರಾ ಪಟ್ಟಣದ ಸೂಗೂರೇಶ್ವರ ರಥೋತ್ಸವ ಗುರುವಾರ ಅದ್ದೂರಿಯಾಗಿ ಜರುಗಿತು   

ಅರಕೇರಾ (ದೇವದುರ್ಗ): ಪಟ್ಟಣದ ಸೂಗೂರೇಶ್ವರ ದೇವಸ್ಥಾನದ ರಥೋತ್ಸವ ಗುರುವಾರ ಸಂಜೆ ಸಂಭ್ರಮ, ಸಡಗರದಿಂದ ಜರುಗಿತು.

ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ರಥವನ್ನು ಎಳೆದು ಸಂಭ್ರಮಿಸಿದರು. ರಥೋತ್ಸವ ನಿಮಿತ್ತ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಥೋತ್ಸವವು ಹಸಿರು ತೋರಣ, ತೆಂಗಿನ ಗರಿ, ಬಾಳೆಗೊನೆ, ಗುಲಾಬಿ, ಸೇವಂತಿಗೆ, ಚೆಂಡು ಹೂ, ನಾಗಸಂಪಿಗೆ, ಡೇರೆ ಹೂಗಳಿಂದ ಸೇರಿದಂತೆ ಬೃಹತ್ ಆಕಾರದ ಪೇಪಾರ ಹೂ, ರುದ್ರಾಕ್ಷಿ ಹಾರಗಳಿಂದ ಶೃಂಗಾರ ಮಾಡಲಾಗಿತ್ತು. ಸಾಯಂಕಾಲ ರಥಕ್ಕೆ ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಸಕಲ ವಾದ್ಯ ಮೇಳಗಳೊಂದಿಗೆ ಕರೆದೊಯ್ಯಲಾಯಿತು. ಸುತ್ತ ಮುತ್ತಲಿನ ಹಳ್ಳಿಗಳಿಂದ ಅಪಾರ ಭಕ್ತರು ಭಾಗವಹಿಸಿದ್ದರು.

ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ಸಂಭ್ರಮಿಸಿದರು. ಸೂಗೂರೇಶ್ವರ ಜಯಘೋಷಗಳನ್ನು ಕೂಗುವ ಮೂಲಕ ರಥವನ್ನು ಬಸವಣ್ಣನ ಪಾದದ ಕಟ್ಟೆಯವರೆಗೆ ಎಳೆದರು.

ADVERTISEMENT

ದೇವದುರ್ಗ ಪೊಲೀಸ್ ಠಾಣೆ ಅಧಿಕಾರಿಗಳು ಬಿಗಿ ಪೋಲಿಸ್ ಬಂದೋಬಸ್ತ್ ಕಲ್ಪಿಸಿದ್ದರು. ಹಿರೇಮಠದ ಚಂದ್ರಶೇಖರಯ್ಯ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ರಾಚಯ್ಯ ಸ್ವಾಮಿ ಮಠಪತಿ, ಗೋಪಿಕೃಷ್ಣ ಗುರುವಿನ, ಜಿ ಪಂ ಮಾಜಿ ಸದಸ್ಯ ಸತ್ಯನಾರಾಯಣ ನಾಯಕ ಪೋಲಿಸ, ಕೆ ಅನಂತರಾಜ ನಾಯಕ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ, ಪ್ರಮುಖರಾದ ತಿಮ್ಮಪ್ಪ ನಾಯಕ ಪೋಲಿಸ್ ಪಾಟೀಲ್, ಚಂದ್ರಶೇಖರ ಶೆಟ್ಟಿ, ಸೀತಣ್ಣ ನಾಯಕ ಗುರಿಕಾರ, ವೆಂಕಟೇಶ ನಾಯಕ ದೊರೆ, ಬಸವರಾಜ ಪೂಜಾರಿ, ಹನುಮಂತ್ರಾಯ, ಪೂಜಾರಿ ಬಸವರಾಜ ಕ್ವಾಟೆ ದೊರೆ, ಶೇಖರಪ್ಪ ಗೌಡ ಮಾಲಿಪಾಟೀಲ, ಸಿದ್ದಾರ್ಥ ಹವಲ್ದಾರ್, ವರದರಾಜ ನಾಯಕ ಸೇರಿದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.