ADVERTISEMENT

ರಾಯಚೂರು | ಹುಡಾ ಗ್ರಾಮದಲ್ಲಿದೆ ‘ಶ್ರೀಮತಿ ಸನ್ನಿಲಿಯೋನ್ ಯುವಕ ಮಂಡಳಿ’

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 6:04 IST
Last Updated 15 ಜನವರಿ 2020, 6:04 IST
   
""

ರಾಯಚೂರು: ದೇಶ- ವಿದೇಶಗಳಲ್ಲಿ ಪಡ್ಡೆ ಹೈದರ ನಿದ್ದೆಗೆಡಿಸಿದ ಮಾದಕ ಬೆಡಗಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಹೆಸರಿನಲ್ಲಿ ಜಿಲ್ಲೆಯಲ್ಲಿ ಯುವಕ ಮಂಡಳಿಯೊಂದು ಸ್ಥಾಪನೆಯಾಗಿದೆ.

ಸಿಂಧನೂರು ತಾಲ್ಲೂಕು ಹುಡಾ ಗ್ರಾಮದಲ್ಲಿ ‘ಶ್ರೀಮತಿ ಸನ್ನಿಲಿಯೋನ್ ಯುವಕ ಮಂಡಳಿ’ಫ್ಲೆಕ್ಸ್ ರಾರಾಜಿಸುತ್ತಿದೆ. ಅದರಲ್ಲಿ 13 ಯುವಕರು ಪಂಚೆ ಕಟ್ಟಿಕೊಂಡು ಸಾಲಾಗಿ ನಿಂತುಕೊಂಡ ಚಿತ್ರಗಳಿವೆ. ನಟಿ ಸನ್ನಿ ಲಿಯೋನ್ ಕೆಂಪು ಸೀರೆ ಧರಿಸಿ ನಿಂತಿರುವ ಚಿತ್ರವನ್ನು ಯುವ ಪದಾಧಿಕಾರಿಗಳ ಪಕ್ಕದಲ್ಲಿ ದೊಡ್ಡದಾಗಿ ಹಾಕಲಾಗಿದೆ.

‘ಶ್ರೀಮತಿ ಸನ್ನಿಲಿಯೋನ್’ಗೌರವ ಸೂಚಕ ಪದ ಸಂಘದ ಹೆಸರಿನ ಆರಂಭದಲ್ಲಿ ಬಳಸಿದ್ದಲ್ಲದೆ, ಅದಕ್ಕೆ ತಕ್ಕಂತೆ ನಟಿಯ ಚಿತ್ರವನ್ನು ಫ್ಲೆಕ್ಸ್‌ನಲ್ಲಿಮುದ್ರಿಸಿರುವುದು ವಿಶೇಷ.

ADVERTISEMENT

ಗ್ರಾಮದಲ್ಲಿ ಜನವರಿ 10 ರಿಂದ 13 ರ ಅಂಬಾದೇವಿ ರಥೋತ್ಸವ ಹಾಗೂ ಕುಂಬೋತ್ಸವ ಆಯೋಜಿಸಲಾಗಿತ್ತು. ಈ ಜಾತ್ರಾ ಸಂದರ್ಭದಲ್ಲಿ ಹುಟ್ಟಿಕೊಂಡ ಯುವಕ ಸಂಘವು ಫ್ಲೆಕ್ಸ್ ಹಾಕಿಸಿದ್ದು, ಗಮನ ಸೆಳೆಯುವಂತಾಗಿದೆ.

ಸಿಂಧನೂರು ತಾಲ್ಲೂಕು ಹುಡಾ ಗ್ರಾಮದಲ್ಲಿರುವ ‘ಶ್ರೀಮತಿ ಸನ್ನಿಲಿಯೋನ್ ಯುವಕ ಮಂಡಳಿ’ಯ ಫ್ಲೆಕ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.