ADVERTISEMENT

ಮಂತ್ರಾಲಯ: ​ಸಂಭ್ರಮದಿಂದ ನೆರವೇರಿದ ಸುವರ್ಣ ರಥೋತ್ಸವ 

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 8:20 IST
Last Updated 24 ಆಗಸ್ಟ್ 2021, 8:20 IST
   

ಮಂತ್ರಾಲಯ: ಶ್ರೀರಾಘವೇಂದ್ರಸ್ವಾಮಿಗಳ ಮಧ್ಯಾರಾಧನೆಯು ಮಂತ್ರಾಲಯದಲ್ಲಿ ಸಂಭ್ರಮದಿಂದ ನೆರವೇರುತ್ತಿದ್ದು, ದರ್ಶನಕ್ಕಾಗಿ ಭಕ್ತರು ವಿವಿಧೆಡೆಯಿಂದ ಆಗಮಿಸುತ್ತಿದ್ದಾರೆ.

ಮಠದ ಪ್ರಾಕಾರದಲ್ಲಿ ಮಂಗಳವಾರ ಭಕ್ತಿಭಾವದೊಂದಿಗೆ ಚಿನ್ನದ ರಥೋತ್ಸವ ನೆರವೇರಿಸಲಾಯಿತು. ಉತ್ಸವ ರಾಯರ ಮೂರ್ತಿಯನ್ನು ರಥದಲ್ಲಿ ಇರಿಸಲಾಗಿತ್ತು. ಅದರ ಎದುರು 'ಪರಿಮಳ' ಗ್ರಂಥವನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ನಡೆಸಲಾಯಿತು.

ಶ್ರೀರಾಘವೇಂದ್ರ ಸ್ವಾಮಿಗಳು ವೃಂದಾವನಸ್ಥರಾಗಿ 350 ನೇ‌ ವರ್ಷಗಳಾದವು. ಆ ದಿನವನ್ನು ಮಧ್ಯಾರಾಧನೆ ಎಂದು ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ.

ADVERTISEMENT

ಬುಧವಾರ ಉತ್ತರಾರಾಧನೆಯಂದು ಮಠದ ಹೊರಭಾಗ ಮಹಾ ರಥೋತ್ಸವ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.