ADVERTISEMENT

ಪ್ರತಿಭಟನೆಗೆ ಮಣಿದು ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿದ ಸಾರಿಗೆ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 15 ಜೂನ್ 2023, 15:49 IST
Last Updated 15 ಜೂನ್ 2023, 15:49 IST
ಲಿಂಗಸುಗೂರು ತಾಲ್ಲೂಕು ಭೂಪುರ ಗ್ರಾಮಕ್ಕೆ ಗುರುವಾರ ಹೆಚ್ಚುವರಿ ಬಸ್ ಬಿಡುತ್ತಿದ್ದಂತೆ ಸಾರಿಗೆ ಸಿಬ್ಬಂದಿಗೆ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಸನ್ಮಾನಿಸಿ ಸಿಹಿ ಹಂಚಿ ಸಂಭ್ರಮಿಸಿದರು
ಲಿಂಗಸುಗೂರು ತಾಲ್ಲೂಕು ಭೂಪುರ ಗ್ರಾಮಕ್ಕೆ ಗುರುವಾರ ಹೆಚ್ಚುವರಿ ಬಸ್ ಬಿಡುತ್ತಿದ್ದಂತೆ ಸಾರಿಗೆ ಸಿಬ್ಬಂದಿಗೆ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಸನ್ಮಾನಿಸಿ ಸಿಹಿ ಹಂಚಿ ಸಂಭ್ರಮಿಸಿದರು   

ಲಿಂಗಸುಗೂರು: ತಾಲ್ಲೂಕಿನ ಹುನಕುಂಟಿದಿಂದ ನಾಗರಹಾಳ ಗ್ರಾಮದವರೆಗೆ ಹೆಚ್ಚುವರಿ ಬಸ್‍ ಸೌಲಭ್ಯ ಕಲ್ಪಿಸುವಂತೆ ಗುರುವಾರ ಮಕ್ಕಳ ನಡೆಸಿದ ಪ್ರತಿಭಟನೆಗೆ ಮಣಿದ ಸಾರಿಗೆ ಘಟಕ ಅಧಿಕಾರಿಗಳು ಬಸ್‌ ಸೌಕರ್ಯ ಕಲ್ಪಿಸಿದರು.

ಗುರುವಾರ ಬೆಳಿಗ್ಗೆ ಭೂಪುರ ಗ್ರಾಮದಲ್ಲಿ ಶಾಲಾ ಕಾಲೇಜು ಮಕ್ಕಳು ಖೈರವಾಡಗಿ, ನಾಗರಹಾಳ, ಮಾವಿನಭಾವಿ ಶಾಲಾ ಕಾಲೇಜಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸಂಚರಿಸುತ್ತಿದ್ದೇವೆ. ಒಂದೇ ಬಸ್‍ ಬರುವುದರಿಂದ ಶಾಲಾ ಕಾಲೇಜಿಗೆ ಹೋಗಲು ಆಗದಂತ ಸ್ಥಿತಿ ನಿರ್ಮಾಣಗೊಂಡಿದ್ದು ಹೆಚ್ಚುವರಿ ಬಸ್‍ ಬಿಡುವಂತೆ ಆಗ್ರಹ ಪಡಿಸಿದ್ದರು.

ಈ ಮೊದಲು ಹಲವು ಬಾರಿ ಸಾರಿಗೆ ಘಟಕಕ್ಕೆ ಮನವಿ ಸಲ್ಲಿಸುತ್ತ ಬಂದಿದ್ದರು ಸ್ಪಂದಿಸದಿರುವುದನ್ನು ವಿರೋಧಿಸಿ ಪ್ರತಿಭಟನೆ ಆರಂಭಗೊಂಡಿತ್ತು. ವಿಷಯ ತಿಳಿದ ಸಾರಿಗೆ ಘಟಕ ವ್ಯವಸ್ಥಾಪಕ ರಾಹುಲ್‍ ಹೊನಸೂರೆ ತಕ್ಷಣ ಹೆಚ್ಚುವರಿ ಬಸ್‍ ಕಳುಹಿಸುತ್ತಿದ್ದಂತೆ ಗ್ರಾಮಸ್ಥರು, ಮಕ್ಕಳು ಸಾರಿಗೆ ಸಿಬ್ಬಂದಿಗೆ ಸನ್ಮಾನಿಸಿದರು ಹಾಗೂ ಸಿಹಿ ಹಂಚಿ ಸಂಭ್ರಮಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.