ADVERTISEMENT

ಮಸ್ಕಿ | ಗ್ರಾಮ ಪಂಚಾಯತಿ ಚುನಾವಣೆ; ಆಕಾಂಕ್ಷಿಗಳಿಂದ ಸದಸ್ಯರಿಗೆ ಪ್ರವಾಸ ಭಾಗ್ಯ!

​ಪ್ರಜಾವಾಣಿ ವಾರ್ತೆ
Published 27 ಜೂನ್ 2023, 13:27 IST
Last Updated 27 ಜೂನ್ 2023, 13:27 IST
ಮಸ್ಕಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಸದಸ್ಯರ ತಂಡವೊಂದು ಮಹಾರಾಷ್ಟ್ರದ ಪುಣ್ಯ ಕ್ಷೇತ್ರವೊಂದರಲ್ಲಿ ದೇವರ ದರ್ಶನ ಪಡೆಯುತ್ತಿರುವುದು
ಮಸ್ಕಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಸದಸ್ಯರ ತಂಡವೊಂದು ಮಹಾರಾಷ್ಟ್ರದ ಪುಣ್ಯ ಕ್ಷೇತ್ರವೊಂದರಲ್ಲಿ ದೇವರ ದರ್ಶನ ಪಡೆಯುತ್ತಿರುವುದು   

ಮಸ್ಕಿ: ತಾಲ್ಲೂಕಿನ 21 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾದ ಬೆನ್ನಲ್ಲೆ ಬಹುತೇಕ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆ ಆಕಾಂಕ್ಷಿಗಳು ಸದಸ್ಯರೊಂದಿಗೆ ಪ್ರವಾಸಕೈಗೊಂಡಿದ್ದಾರೆ.

ಮೀಸಲಾತಿ ಪ್ರಕಟವಾದ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜಿಲ್ಲಾಡಳಿತ ಚುನಾವಣೆ ಘೋಷಣೆ ಮಾಡುವ ಸಾಧ್ಯತೆ ಇದೆ. ದಿನಾಂಕ ಘೋಷಣೆವರೆಗೂ ಸದಸ್ಯರನ್ನು ಒಂದೇಡೆ ಹಿಡಿದಿಟ್ಟುಕೊಳ್ಳಲು ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಸ್ಥಾನದ ಆಕಾಂಕ್ಷಿಗಳು, ಪಕ್ಷಗಳ ಮುಖಂಡರ ಸಲಹೆ ಸೂಚನೆ ಮೇರೆಗೆ ರಾಜ್ಯದ ಪ್ರಮುಖ ಸ್ಥಳಗಳ ಜೊತೆಗೆ ಮಹಾರಾಷ್ಟ್ರ ಹಾಗೂ ಕೇರಳ, ತಮಿಳುನಾಡಿನ ಪ್ರಮುಖ ಸ್ಥಳಗಳ ಧಾರ್ಮಿಕ ಕ್ಷೇತ್ರಗಳ ದರ್ಶನ ಆರಂಭಿಸಿದ್ದಾರೆ.

ಒಂದು ವಾರದಿಂದ ಪ್ರವಾಸದಲ್ಲಿರುವ ಸದಸ್ಯರು ಚುನಾವಣೆ ದಿನಾಂಕ ನಿಗದಿಯಾದ ದಿನವೇ ನೆರವಾಗಿ ಬಂದು ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ಬಿಜೆಪಿ, ಕಾಂಗ್ರೆಸ್ ಮುಖಂಡರು ತಮ್ಮ ಬೆಂಬಲಿತ ಸದಸ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ADVERTISEMENT

ದಿನಾಂಕ ಘೋಷಣೆ 15 ರಿಂದ 1 ತಿಂಗಳಾಗಬಹುದು. ಅಲ್ಲಿವರೆಗೆ ವಾಹನಗಳ ಖರ್ಚು, ಲಾಡ್ಜ್‌, ಊಟ ಜೊತೆಗೆ ಸದಸ್ಯರು ಬೇಡಿಕೆ ಇಡುವ ಎಲ್ಲಾ ಖರ್ಚುಗಳನ್ನು ಆಕಾಂಕ್ಷಿಗಳು ಭರಿಸಬೇಕಾಗಿದೆ.

ಮಸ್ಕಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಸದಸ್ಯರ ತಂಡವೊಂದು ಮಹಾರಾಷ್ಟ್ರದ ಪುಣ್ಯ ಕ್ಷೇತ್ರವೊಂದರಲ್ಲಿ ದೇವರ ದರ್ಶನ ಪಡೆಯುತ್ತಿರುವುದು
ಮಸ್ಕಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಸದಸ್ಯರ ತಂಡವೊಂದು ಮಹಾರಾಷ್ಟ್ರದ ಪುಣ್ಯ ಕ್ಷೇತ್ರವೊಂದರಲ್ಲಿ ದೇವರ ದರ್ಶನ ಪಡೆಯುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.