ADVERTISEMENT

416 ಕಿ.ಮೀ ಕ್ರಮಿಸಿದ ಸೈಕಲ್‌ ಸವಾರರ ಸನ್ಮಾನ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 14:33 IST
Last Updated 4 ಆಗಸ್ಟ್ 2024, 14:33 IST
ರಾಯಚೂರಿನಲ್ಲಿ ಭಾನುವಾರ ಸೈಕಲ್ ಸವಾರರನ್ನು ಸನ್ಮಾನಿಸಲಾಯಿತು
ರಾಯಚೂರಿನಲ್ಲಿ ಭಾನುವಾರ ಸೈಕಲ್ ಸವಾರರನ್ನು ಸನ್ಮಾನಿಸಲಾಯಿತು   

ರಾಯಚೂರು: ಸೌಹಾರ್ದ ಪತ್ತಿನ ಸಹಕಾರ ಬ್ಯಾಂಕ್ ವತಿಯಿಂದ ಸೈಕಲ್ ಸವಾರರ ಸನ್ಮಾನ ಕಾರ್ಯಕ್ರಮ ಭಾನುವಾರ ನಡೆಯಿತು.

ರಾಯಚೂರು ಸೈಕಲ್ ರೈಡರ್ಸ್ ಅಸೋಸಿಯೇಷನ್‌ನ 16 ಸದಸ್ಯರು ಶ್ರೀನಗರದಿಂದ ಕಾರ್ಗಿಲ್‌ವರೆಗೆ ಸುಮಾರು 416 ಕಿ.ಮೀ ಸೈಕಲ್ ಮೇಲೆ ತೆರಳಿ ಕಾರ್ಗಿಲ್‌ ವಿಜಯ ದಿವಸ್‌ ಆಚರಿಸಿದ್ದರು.

ಸಹಕಾರ ಬ್ಯಾಂಕ್‌ನ ಅಧ್ಯಕ್ಷ ವಿಶ್ವನಾಥಸ್ವಾಮಿ ಹಿರೇಮಠ ಸೈಕಲ್‌ ಸವಾರರನ್ನು ಸನ್ಮಾನಿಸಿದರು.

ADVERTISEMENT

ವಿಶ್ವನಾಥ ಸ್ವಾಮಿ ಹಿರೇಮಠ ಜನ್ಮದಿನದ ಅಂಗವಾಗಿ ಮಸ್ಕಿಯ ಅನಾಥಾಶ್ರಮದಲ್ಲಿ ಹಾಗೂ ರಾಯಚೂರಿನ ಮಾಣಿಕ ಪ್ರಭು ಅಂಧ ಮಕ್ಕಳ ಶಾಲೆಯಲ್ಲಿ ಅನ್ನ ಸಂತರ್ಪಣೆ ಮಾಡಲಾಯಿತು.

ಡಾ. ಬಸವರಾಜ ಪಾಟೀಲ, ಡಾ.ಸಕಲೇಶ ಪಾಟೀಲ, ಮಲ್ಲಿಕಾರ್ಜುನ ಸಿಂಗಡದಿನ್ನಿ, ಬಸವರಾಜ ನಾಗಡದಿನ್ನಿ, ಡಾ. ಪಾಟೀಲ, ರವಿ ಗಣೇಕಲ್ ಪಾಟೀಲ ತೋರಣದಿನ್ನಿ, ಪವನಗೌಡ, ಸಂದೀಪ ಕಲ್ಲೂರ್, ನಾಗರಾಜ ಗಡಾಲೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.