ADVERTISEMENT

ಮಂತ್ರಾಲಯ: ಕೊಳವೆ ಮೂಲಕ ಪುಷ್ಕರ ಸ್ನಾನ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 13:14 IST
Last Updated 22 ನವೆಂಬರ್ 2020, 13:14 IST
ತುಂಗಭದ್ರಾ ನದಿ ನೀರನ್ನು ಕೊಳವೆ ಮೂಲಕ ಹರಿಸುವ ವ್ಯವಸ್ಥೆ ಮಾಡಲಾಗಿದೆ.
ತುಂಗಭದ್ರಾ ನದಿ ನೀರನ್ನು ಕೊಳವೆ ಮೂಲಕ ಹರಿಸುವ ವ್ಯವಸ್ಥೆ ಮಾಡಲಾಗಿದೆ.   

ರಾಯಚೂರು: ಮಂತ್ರಾಲಯದಲ್ಲಿ ತುಂಗಭದ್ರಾ ನದಿ ನೀರನ್ನು ಕೊಳವೆ ಮೂಲಕ ಹರಿಸುವ ವ್ಯವಸ್ಥೆ ಮಾಡಿದ್ದು, ಜನರು ಅದರಲ್ಲೇ ಪುಷ್ಕರ ಪುಣ್ಯ ಸ್ನಾನ ಮಾಡುವುದಕ್ಕೆ ಆಂಧ್ರಪ್ರದೇಶ ಪೊಲೀಸರು ಭಾನುವಾರ ಅವಕಾಶ ನೀಡಿದ್ದಾರೆ.

ಶ್ರಾದ್ಧಪೂಜೆ, ತರ್ಪಣ ಹಾಗೂ ಪಿಂಡಪ್ರದಾನ ಮಾಡಲು ಬರುವವರನ್ನು ನದಿತೀರದವರೆಗೂ ಹೋಗುವುದಕ್ಕೆ ಅನುಮತಿಸಿದ್ದು, ನದಿಯೊಳಗೆ ಇಳಿಯುವಂತಿಲ್ಲ. ನದಿದಂಡೆಯುದ್ದಕ್ಕೂ ಅಡ್ಡಲಾಗಿ ಜಾಳಿಗೆ ಕಟ್ಟಲಾಗಿದೆ. ಪಂಪ್ ಸೆಟ್ ಮೂಲಕ ನೀರು ಹರಿಸುತ್ತಿದ್ದಾರೆ.

ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರೆಯುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.