ರಾಯಚೂರು: ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಶನಿವಾರ ಈಜಲು ಹೋಗಿದ್ದ ಮೂವರು ಯುವಕರು ನಾಪತ್ತೆಯಾಗಿದ್ದಾರೆ.
ಹಾಸನ ಜಿಲ್ಲೆಯ ಮೂಲದ ಅಜಿತ್(20), ಸಚಿನ್(20)ಹಾಗೂ ಪ್ರಮೋದ(19) ನಾಪತ್ತೆಯಾಗಿದ್ದಾರೆ
ಮೂವರು ಯುವಕರು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಬಂದಿದ್ದರು. ದರ್ಶನಕ್ಕೆ ಮೊದಲು ಸ್ನಾನಕ್ಕೆಂದು ತುಂಗಭದ್ರಾ ನದಿಯಲ್ಲಿ ಇಳಿದು, ಈಜಲು ಹೋದಾಗ ನಾಪತ್ತೆಯಾಗಿದ್ದಾರೆ.
ಮಂತ್ರಾಲಯದ ಪೊಲೀಸರು ಹಾಗೂ ಈಜುಗಾರರು ತಂಡವು ಶೋಧ ಕಾರ್ಯ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.