
ಮುದಗಲ್: ಕೋಟೆ ಮುಂಭಾಗದ ಕಂದಕದ ಬಳಿ ನಡೆದ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಶಾಸಕ ಮಾನಪ್ಪ ಡಿ.ವಜ್ಜಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
₹35 ಲಕ್ಷ ಮೊತ್ತದಲ್ಲಿ ನಡೆದ ತಡೆಗೋಡೆ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿದೆ. ಚಾವಡಿ ಕಟ್ಟೆ ಹಿಂದಿನ ರಸ್ತೆಯುದ್ದಕ್ಕೂ ಮೊಹರಂ ಕೊನೆಯ ದಿನದ ದೃಶ್ಯಾವಳಿಗಳ ವೀಕ್ಷಣೆಗೆ ಲಕ್ಷಾಂತರ ಜನರು ಬರುತ್ತಾರೆ. ಅವೈಜ್ಞಾನಿಕವಾಗಿ ತಡೆಗೋಡೆ ನಿರ್ಮಿಸುತ್ತಿರುವ ಕಾರಣ ರಸ್ತೆ ಇಕ್ಕಟ್ಟಾಗಿದೆ. ಇಂಥ ಕಾಮಗಾರಿಗೆ ಹೇಗೆ ಅವಕಾಶ ನೀಡಿದಿರಿ ಎಂದು ಪಿಡಬ್ಲ್ಯೂಡಿ ಜೆಇ ಗಜಾನನ ಅವರನ್ನು ತರಾಟೆಗೆ ತೆಗೆದುಕೊಂಡರು.
ಕಂದಕದ ಬಳಿ ರಸ್ತೆಯಲ್ಲಿಯೇ ತಡೆಗೋಡೆ ನಿರ್ಮಾಣ ಕಾರ್ಯ ನಡೆದಿದೆ. ಇದರಿಂದ ನಿತ್ಯ ಸಂಚರಿಸುವ ವಾಹನಗಳಿಗೆ ತೊಂದರೆಯಾಗುತ್ತಿದೆ. ರಸ್ತೆ ವಿಸ್ತರಣೆ ಮಾಡಿ ಕಾಮಗಾರಿ ಪ್ರಾರಂಭಿಸಿ ಎಂದು ಸೂಚಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಗಿರಿಮಲ್ಲನಗೌಡ ಕರಡಕಲ್, ಲಿಂಗಸುಗೂರು ಮಂಡಲ ಅಧ್ಯಕ್ಷ ನಾಗಭೂಷಣ, ಮುದಗಲ್ ಮಂಡಲ ಅಧ್ಯಕ್ಷ ಹುಲ್ಲೇಶ ಸಾಹುಕಾರ, ನಗರ ಘಟಕದ ಅಧ್ಯಕ್ಷ ಕರಿಯಪ್ಪ ಯಾದವ, ಅಯ್ಯಪ್ಪ ಮಾಳೂರ, ಮುದುಕಪ್ಪ ನಾಯಕ, ಉದಯಕುಮಾರ ಕಮ್ಮಾರ, ಕಾಂತು ಪತ್ತಾರ, ಸಣ್ಣ ಸಿದ್ದಯ್ಯಸ್ವಾಮಿ, ನಾಗರಾಜ ತಳವಾರ, ಮಂಜುನಾಥ, ಚಂದಾವಲಿಸಾಬ್, ಪುರಸಭೆ ಮುಖ್ಯಾಧಿಕಾರಿ ಪ್ರವಿಣ ಬೋಗಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.