ADVERTISEMENT

ನರೇಗಾ ಸಮಯ ಬದಲಾವಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಮೇ 2022, 12:58 IST
Last Updated 6 ಮೇ 2022, 12:58 IST
ರಾಯಚೂರಿನ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಅಖಿಲ ಭಾರತ ರೈತ–ಕೃಷಿ ಕಾರ್ಮಿಕರ ಸಂಘಟನೆ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ರಾಯಚೂರಿನ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಅಖಿಲ ಭಾರತ ರೈತ–ಕೃಷಿ ಕಾರ್ಮಿಕರ ಸಂಘಟನೆ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.   

ರಾಯಚೂರು: ನರೇಗಾ ಕೆಲಸದ ಅವಧಿಯನ್ನು ಮದ್ಯಾಹ್ನ 2 ಗಂಟೆಯವರೆಗೆ ನಿಗದಿ ಮಾಡಿದ್ದನ್ನು ಖಂಡಿಸಿ ಅಖಿಲ ಭಾರತ ರೈತ–ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್ ) ಜಿಲ್ಲಾ ಸಮಿತಿಯ ಪದಾಧಿಕಾರಿಗಳು ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರ ಈಚೆಗೆ ಆದೇಶ ಹೊರಡಿಸಿ ಎನ್ ಎಂಎಂಎಸ್ ಆ್ಯಪ್ ಮೂಲಕ ನರೇಗ ಕೆಲಸವನ್ನು ಪ್ರತಿದಿನ ಬೆಳಿಗ್ಗೆ 11ರೊಳಗೆ ಹಾಗೂ ಮದ್ಯಾಹ್ನ 2ರಿಂದ 5ರೊಳಗೆ ಫೋಟೋ ಹಾಕಬೇಕು ಎಂದು ತಿಳಿಸಲಾಗಿದೆ.

ಆದರೆ ನರೇಗಾ ಕಾರ್ಮಿಕರಲ್ಲಿ ಬಹುತೇಕರಲ್ಲಿ ಅನಕ್ಷರಸ್ಥರಿದ್ದು ಆ್ಯಪ್ ಬಳಸಲು ಆಗುತ್ತಿಲ್ಲ ಹಾಗೂ ಕೆಲಸದ ಅವಧಿಯನ್ನು ಮದ್ಯಾಹ್ನ 2 ಗಂಟೆಯವರೆಗೆ ಹೆಚ್ಚಿಸಿದ್ದು ಖಂಡನೀಯ. ಜಿಲ್ಲೆಯಲ್ಲಿ 40ರಿಂದ 42 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ದಾಖಲಾಗುತ್ತಿದ್ದು ಕಾರ್ಮಿಕರಿಗೆ ಸಮಸ್ಯೆಯಾಗುತ್ತಿದೆ. ಬಿಸಿಲಿನಿಂದ ಬಳಲುವ ಕಾರ್ಮಿಕರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ ಎಂದು ದೂರಿದರು.

ADVERTISEMENT

ಕೂಡಲೇ ಕೆಲಸದ ಅವಧಿಯಲ್ಲಿ ಕಡಿಮೆಗೊಳಿಸಿ ಮೊದಲಿನಂತೆ ಕೆಲಸದ ಅವಧಿ ನಿಗದಿ ಮಾಡಬೇಕು. ಎನ್.ಎಂಎಂಎಸ್ ಆ್ಯಪ್ ಪೋಟೋ ಹಾಕುವ ನಿಯಮ ಹಿಂಪಡೆಯಬೇಕು. ನಿಗದಿತ ಕೂಲಿಯನ್ನು ಯಾವುದೇ ಕಡಿತಗೊಳಿಸದೇ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಐಕೆಕೆಎಂಎಸ್ ಜಿಲ್ಲಾ ಕಾರ್ಯದರ್ಶಿ ಮಲ್ಲನಗೌಡ, ಅಂಚೆಹೊಸೂರು, ಜಿಲ್ಲಾಧ್ಯಕ್ಷ ಜಮಾಲುದ್ದೀನ್, ಪದಾಧಿಕಾರಿ ಚನ್ನಬಸವ ಜಾನೇಕಲ್, ಕಾರ್ತಿಕ್, ಮಲ್ಲಿಕಾರ್ಜುನ, ವೆಂಕಟೇಶ, ಮಹಮ್ಮದ್ ಅಲಿ, ಆದೆಪ್ಪ, ಉರುಕುಂದ, ರಮೇಶ, ಯಂಕಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.