ADVERTISEMENT

ಕಲಾವಿದರಿಗೆ ಧನಸಹಾಯ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 11:22 IST
Last Updated 28 ಜುಲೈ 2020, 11:22 IST

ರಾಯಚೂರು: ಕೋವಿಡ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಕಲಾವಿದರಿಗೆ ಮಾಸಿಕ ₹3 ಸಾವಿರ ಕಲಾವಿದರ ಕಾರ್ಯಕ್ರಮಗಳು ಆರಂಭ ಆಗುವವರೆಗೆ ಧನಸಹಾಯ ನೀಡಬೇಕು ಎಂದು ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟ ಜಿಲ್ಲಾ ಘಟಕದ ಪದಾಧಿಕಾರಿಗಳು ಒತ್ತಾಯಿಸಿದರು.

ಮಂಗಳವಾರ ಜಿಲ್ಲಾಡಳಿತದ ಮುಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿ, ಜಿಲ್ಲೆಯಲ್ಲಿ ಮೂರುಸಾವಿರಕ್ಕಿಂತ ಹೆಚ್ಚು ಸಂಘಟಿತ ಮತ್ತು ಅಸಂಘಟಿತ ಕಲಾವಿದರಿದ್ದು, ಎಲ್ಲರೂ ಇಲಾಖೆಯಲ್ಲಿ ನೊಂದಣಿ ಮಾಡಿಕೊಂಡಿದ್ದಾರೆ. ಆದರೆ ಈವರೆಗೆ ಈ ಕಲಾವಿದರಿಗೆ ಸರ್ಕಾರದಿಂದ ಯಾವುದೇ ರೀತಿಯ ಧನಸಹಾಯ, ಪರಿಹಾರವಾಗಲಿ ದೊರೆತಿಲ್ಲ ಎಂದು ದೂರಿದರು.

ರಾಜ್ಯದ ಎಲ್ಲಾ ಕಲಾವಿದರಿಗೆ ಬಸ್ ಮತ್ತು ರೈಲ್ವೆ ಪ್ರಯಾಣ ದರದಲ್ಲಿ ರಿಯಾಯತಿ ನೀಡಬೇಕು. ಸರ್ಕಾರ ಕಲಾವಿದರ ಸಂಕಷ್ಟಕ್ಕೆ ನೆರವಾಗಬೇಕು ಎಂದು ಜಿಲ್ಲಾ ಸಂಚಾಲಕ ಡಿಂಗ್ರಿ ನರೇಶ, ಜೋಸೆಫ್ ಆಶಾಪುರ ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.