ADVERTISEMENT

ಭೂಗಳ್ಳರ ಕೈವಾಡ ಸಮಗ್ರ ತನಿಖೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 20:00 IST
Last Updated 4 ಡಿಸೆಂಬರ್ 2019, 20:00 IST

ರಾಯಚೂರು: ನಗರದ ಸರ್ವೆ ಸಂಖ್ಯೆ: 33/1 ವಿಸ್ತೀರ್ಣ:39 ಎಕರೆ 22 ಗುಂಟೆ ಸರ್ಕಾರಿ ಕೆರೆಯ ಭೂಮಿ ಜಿಲ್ಲಾಡಳಿತಕ್ಕೆ6 ತಿಂಗಳಲ್ಲಿ ಸರ್ವೆ ವರದಿ ನೀಡುವಂತೆ ಹೈಕೋರ್ಟ್ ಆದೇಶಿಸಿತ್ತು. ಆದರೆ, ಅಧಿಕಾರಿಗಳು ಸರ್ವೆ ವರದಿ ಸಲ್ಲಿಸುವಲ್ಲಿ ಆರು ತಿಂಗಳ ತಡವಾಗಿರುವುದರ ಹಿಂದೆ ಭೂಗಳ್ಳರ ಕೈವಾಡ ಇದೆ ಎಂದು ರಾಯಚೂರಿನ ಸರ್ಕಾರಿ ಭೂಮಿ ಉಳಿಸಿ ಹೋರಾಟ ಸಮಿತಿ ಆರೋಪಿಸಿದೆ.

ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದ ಅವರು, ಕಳೆದ ಐದು ವರ್ಷಗಳಿಂದ ಸತತ ಹೋರಾಟ ಮಾಡಲಾಗುತ್ತಿದೆ. ಹಿಂದಿನ ಜಿಲ್ಲಾಧಿಕಾರಿ ಸರ್ಕಾರಿ ಭೂಮಿ ಎಂದು ನಾಮಫಲಕ ಹಾಕಿ ತೆರವಿಗೆ ಆದೇಶ ಹೊರಡಿಸಿದ್ದರು. ನಗರಸಭೆ ಅಧಿಕಾರಿಗಳು ತೆರವು ಆದೇಶವನ್ನು ಮುಚ್ಚಿ ಹಾಕಿ ತೆರವು ಮಾಡದೇ ಭೂಗಳ್ಳರಿಗೆ ನ್ಯಾಯಾಲಯಕ್ಕೆ ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ನಗರಸಭೆ ಅಧಿಕಾರಿಗಳು ಸಂಪೂರ್ಣ ಭೂಗಳ್ಳರ ಪಾಲಾಗಿದ್ದಾರೆ ಎಂದರು.

ಈ ಕುರಿತು ಜಿಲ್ಲಾಧಿಕಾರಿಗಳು ಸಮಗ್ರ ಪರಿಶೀಲನೆ ನಡೆಸಿ ಸರ್ಕಾರಿ ಭೂಮಿ ರಕ್ಷಣೆಗೆ ಮುಂದಾಬೇಕು. ಅಕ್ರಮ ಕಟ್ಟಡಗಳು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಅಬ್ದುಲ್ ಸತ್ತಾರ, ಶ್ರೀನಿವಾಸ, ನರಸಿಂಹ, ಎಂ.ಮಾರೆಪ್ಪ, ರಾಮು, ಪಿ.ಎಸ್.ವೀರಯ್ಯ ವಕೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.