ADVERTISEMENT

ಲಿಂಗಸುಗೂರು |ವಾಲ್ಮೀಕಿ ಜೀವನ ಎಲ್ಲರಿಗೂ ಮಾದರಿ: ಬಸವಣಪ್ಪ ಕಲಶೆಟ್ಟಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 5:38 IST
Last Updated 8 ಅಕ್ಟೋಬರ್ 2025, 5:38 IST
ಲಿಂಗಸುಗೂರು ಪಟ್ಟಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉಪವಿಭಾಗಾಧಿಕಾರಿ ಬಸವಣಪ್ಪ ಕಲಶೆಟ್ಟಿ ಉದ್ಘಾಟಿಸಿದರು
ಲಿಂಗಸುಗೂರು ಪಟ್ಟಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉಪವಿಭಾಗಾಧಿಕಾರಿ ಬಸವಣಪ್ಪ ಕಲಶೆಟ್ಟಿ ಉದ್ಘಾಟಿಸಿದರು   

ಲಿಂಗಸುಗೂರು: ‘ಮಹರ್ಷಿ ವಾಲ್ಮೀಕಿ ಅವರ ಜೀವನ ಎಲ್ಲರಿಗೂ ಮಾದರಿಯಾಗಿದೆ’ ಎಂದು ಉಪವಿಭಾಗಾಧಿಕಾರಿ ಬಸವಣಪ್ಪ ಕಲಶೆಟ್ಟಿ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮಂಗಳವಾರ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣ ಮಹಾಕಾವ್ಯ ನಮಗೆ ಕೆಟ್ಟ ದಾರಿ ಬಿಟ್ಟು ಸರಿದಾರಿ ಕಡೆಗೆ ಸಾಗಲು ಮಾರ್ಗದರ್ಶಕವಾಗಿದೆ. ಪಿತೃವಾಕ್ಯ ಪರಿಪಾಲನೆ, ಏಕಪತ್ನಿ ವ್ರತಸ್ಥ, ಆಶ್ರಮ ಶಾಲೆಗಳ ಪರಿಕಲ್ಪನೆ, ಪ್ರಜೆಗಳ ಅಭಿಪ್ರಾಯಕ್ಕೆ ಮನ್ನಣೆ, ವಿಜ್ಞಾನ-ತಂತ್ರಜ್ಞಾನದ ಪೂರಕ ಬಳಕೆ ಹೀಗೆ ಜನಸಾಮಾನ್ಯರ ಬದುಕಿಗೆ ಅಗತ್ಯವಾದ ಹಲವಾರು ಆದರ್ಶದ ಅಂಶಗಳನ್ನು ಒಳಗೊಂಡಿದೆ’ ಎಂದರು.

ADVERTISEMENT

ಶಾಸಕ ಮಾನಪ್ಪ ವಜ್ಜಲ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಪಾಮಯ್ಯ ಮುರಾರಿ, ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಕರಡಕಲ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಸಣ್ಣ ಮೇಟಿ, ಎಪಿಎಂಸಿ ಅಧ್ಯಕ್ಷ ಅಮರೇಶ ಹೆಸರೂರು, ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವೆಂಕಟೇಶ ಗುತ್ತೇದಾರ, ತಹಶೀಲ್ದಾರ್ ಸತ್ಯಮ್ಮ, ತಾ.ಪಂ ಇಒ ಉಮೇಶ, ಪಿಐ ಪುಂಡಲಿಕ ಪಟಾತರ, ತಾಲ್ಲೂಕು ಮಟ್ಟದ ಅಧಿಕಾರಿಗಳಾದ ಸುಭಾಷಚಂದ್ರ ನಾಯಕ, ಸುಜಾತಾ ಹೂನೂರು, ಲಕ್ಷ್ಮೀದೇವಿ, ನಾಗರತ್ನ ನಾಯಕ, ಶರಣಪ್ಪ, ಅಮರೇಶ ಮಾಕಾಪುರ, ಎ.ಎಸ್.ಪಾಟೀಲ, ಬನ್ನೆಪ್ಪ ಕರಿಬಂಟನಾಳ, ಷಡಾಕ್ಷರಿ, ರವಿಂದ್ರ ಉಪ್ಪಾರ, ಶ್ರೀಶೈಲ ವಾಘ್ಮೋರೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಜಿಬಾಬು, ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ದ್ಯಾಮಣ್ಣ ನಾಯಕ, ಚಿದಾನಂದ ನಾಯಕ, ನಾಗಪ್ಪ ಗುರುಗುಂಟಾ, ಜಮದಗ್ನಿ ಶರಣಪ್ಪ, ಸುಧಾ, ಅನ್ನಪೂರ್ಣ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.