ಲಿಂಗಸುಗೂರು: ವಿಪರೀತವಾಗಿ ಸುರಿದ ಮಳೆಯಿಂದಾಗಿ ತಾಲ್ಲೂಕಿನ ಈಚನಾಳ ಗ್ರಾಮದ ಬಳಿಯ ಹಳ್ಳ ಭರ್ತಿಯಾಗಿ ಹರಿಯುತ್ತಿರುವ ನೀರಿನಲ್ಲಿಯೇ ತಂದೆ ತನ್ನ ಮಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಶಾಲೆಗೆ ಬಿಟ್ಟು ಬಂದ ಪ್ರಸಂಗ ಸೋಮವಾರ ನಡೆದಿದೆ.
ಈಚನಾಳ ಗ್ರಾಮದ ಹೊರವಲಯದಲ್ಲಿರುವ ಮನೆಯೊಂದರಲ್ಲಿ ವಾಸವಾಗಿರುವ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಆನಂದ ಕುಂಬಾರ ಅವರು ಈಚನಾಳ-ನೀರಲಕೇರಾ ನಡುವಿನ ಹಳ್ಳ ಭರ್ತಿಯಾಗಿದ್ದು, ಆದರೆ ತನ್ನ ಮಗಳು ಶಾಲೆ ಬಿಡಸಬಾರದು ಎಂಬ ಉದ್ದೇಶದಿಂದ ಹರಿಯುವ ನೀರಿನಲ್ಲಿಯೇ ತನ್ನ ಮಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಹಳ್ಳ ದಾಟಿಸಿ ಈಚನಾಳ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆಗೆ ಬಿಟ್ಟ ಬಂದ ವಿಡಿಯೊ ವೈರಲ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.