ಕವಿತಾಳ: ‘ಪ್ರತಿ ಕ್ಷಣ ಸಾವನ್ನು ಎದುರು ನೋಡುತ್ತಾ ದೇಶ ಕಾಯುವ ಕೆಲಸದಲ್ಲಿ ಯೋಧರು ನಿರತರಾಗಿದ್ದರಿಂದಲೇ ಪ್ರಜೆಗಳು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗಿದೆʼ ಎಂದು ಪತ್ರಕರ್ತ ಎ.ಟಿ.ಪಾಟೀಲ ಹೇಳಿದರು.
ಹಿರೇಹಣಿಗಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಿವೃತ್ತ ಯೋಧ ಶಿವಪ್ಪ ಇಲಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ʼಸ್ವಂತ ಊರು, ಮನೆ, ಕುಟುಂಬ ಎಲ್ಲವನ್ನೂ ಮರೆತು ದೇಶದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧರಾಗಿರುವ ಸೈನಿಕರು ನಮಗೆ ಮಾದರಿ’ ಎಂದರು.
ಮುಖಂಡರಾದ ವೀರನಗೌಡ ಮಾಲಿ ಪಾಟೀಲ, ಶಿವಣ್ಣ ವಕೀಲ, ಕಿರಲಿಂಗಪ್ಪ, ಬಸವರಾಜ ಪಾಟೀಲ ವಕೀಲ ಮತ್ತು ನಿವೃತ್ತ ಯೋಧ ಆಂಜನೇಯ ನಾಯಕ ಜಲ್ಲಿ ಮಾತನಾಡಿದರು.
25 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧ ಶಿವಪ್ಪ ಇಲಿ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು.
ನಾಗಯ್ಯ ತಾತ ಗುರುವಿನ, ಶಿವಣ್ಣ ತಾತ, ಶಿವಶಂಕ್ರಪ್ಪ ಪೂಜಾರಿ, ಕರಿಯಪ್ಪ ಜಡೆ ಪೂಜಾರಿ, ರಾಮಣ್ಣ ಪೂಜಾರಿ ಮತ್ತು ರವಿಕುಮಾರ ಹಿರೇಮಠ ಕಾರ್ಯಕ್ರಮ ಸಾನ್ನಿಧ್ಯ ವಹಿಸಿದ್ದರು.
ಮುಖಂಡರಾದ ಯಮನಪ್ಪ ದಿನ್ನಿ, ತಿಮ್ಮನಗೌಡ ಪಾಟೀಲ, ಮಂಜುನಾಥ ಜಲ್ಲಿ, ಮಾಳಿಂಗರಾಯ ಹಣಗಿ, ಮಂಜುನಾಥ ಪಾಟೀಲ, ಮಲ್ಲಯ್ಯ, ನೀಲಪ್ಪ, ವಿಜಯೇಂದ್ರ, ಬಸವರಾಜ, ಈಶಪ್ಪ, ಗಂಗಪ್ಪ ದಿನ್ನಿ, ಎಚ್. ಕೆ. ಅಮರೇಶ, ಮಾಳಿಂಗರಾಯ, ಹನುಮಂತರಾಯ ಪಾಟೀಲ. ನವೀನ ಕುಮಾರ, ಮೌನೇಶ ಪೂಜಾರಿ, ಶಿವನಪ್ಪ ದಿನ್ನಿ, ಶಿವರಾಜ ಪಾಟೀಲ. ಲಿಂಗರಾಜ ತೊಳ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.