ADVERTISEMENT

ವಿಜಯದಶಮಿ: ಸುರಕ್ಷತೆಗಾಗಿ ಬಳಸುವ ಆಯುಧಗಳಿಗೆ ಪೂಜೆ

ಎಲ್‌ವಿಡಿ ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 12:43 IST
Last Updated 20 ಅಕ್ಟೋಬರ್ 2018, 12:43 IST
ರಾಯಚೂರಿನ ಎಲ್‌ವಿಡಿ ಮಹಾವಿದ್ಯಾಲಯದಲ್ಲಿ ವಿಜಯ ದಶಮಿ ಹಬ್ಬದಂದು ಶುಕ್ರವಾರ ಏರ್ಪಡಿಸಿದ್ದ ಆಯುಧ ಪೂಜೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಪಾಲ್ಗೊಂಡಿದ್ದರು
ರಾಯಚೂರಿನ ಎಲ್‌ವಿಡಿ ಮಹಾವಿದ್ಯಾಲಯದಲ್ಲಿ ವಿಜಯ ದಶಮಿ ಹಬ್ಬದಂದು ಶುಕ್ರವಾರ ಏರ್ಪಡಿಸಿದ್ದ ಆಯುಧ ಪೂಜೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಪಾಲ್ಗೊಂಡಿದ್ದರು   

ರಾಯಚೂರು: ಬದುಕಿಗೆ ಆಸರೆಯಾಗಿ ಬಳಸುವ ಹಾಗೂ ಕಾಪಾಡಿಕೊಳ್ಳಲು ಇಟ್ಟುಕೊಂಡ ಆಯುಧಗಳನ್ನೆಲ್ಲ ದೇವರ ಸನ್ನಿಧಿಯಲ್ಲಿಟ್ಟು ವಿಜಯದಶಮಿ ಹಬ್ಬದ ದಿನದಂದು ಪೂಜಿಸುವ ವಿಶಿಷ್ಟ ದಿನವೆ ಆಯುಧ ಪೂಜೆ ಎಂದು ಎಲ್‌ವಿಡಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಶಕುಂತಲಾ ಗೋಪಶೆಟ್ಟಿ ಹೇಳಿದರು.

ನಗರದ ಎಲ್‌ವಿಡಿ ಮಹಾವಿದ್ಯಾಲಯದಲ್ಲಿ ವಿಜಯದಶಮಿ ಹಬ್ಬದ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಆಯುಧ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇವತೆಗಳಿಗೆ ವಿಪರೀತ ಕಾಟ ಕೊಡುತ್ತಿದ್ದ ಮಹಿಷಾಸುರನನ್ನು ನವರಾತ್ರಿಯ ಒಂಬತ್ತನೇ ದಿನದಂದು ತಾಯಿ ಚಾಮುಂಡೇಶ್ವರಿ ಸಂಹರಿಸಿದಳು ಎನ್ನುವ ಪ್ರತೀತಿ ಇದೆ. ಈ ಹಬ್ಬವು ಭವದ ಬಂಧನ ಕಳೆದು ಮನದ ಸಂಕಟ ಅಳಿಸಲಿ. ಎಲ್ಲರ ಬದುಕನ್ನು ಬೆಳಗಿಸಲಿ. ಜಗತ್ತಿನಲ್ಲಿ ಸತ್ಯದ ದಿವ್ಯ ಪ್ರಭೆ ಸದಾಕಾಲ ಝಗಮಗಿಸಲಿ. ವಿಜಯದಶಮಿ ಹಬ್ಬವು ಸಕಲರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂದು ಆಶಿಸಿದರು.

ADVERTISEMENT

ಭಾಷಾ ಪ್ರಯೋಗಾಲಯ, ಸಂಗೀತ ವಿಭಾಗ ಮತ್ತು ಗಣಕಯಂತ್ರ ವಿಭಾಗದಲ್ಲಿ ಆಯುಧ ಪೂಜೆಗಳನ್ನು ನೆರವೇರಿಸಲಾಯಿತು.

ಭಾಷಾ ಪ್ರಯೋಗಾಲಯದಲ್ಲಿ ಗಣಿತ ವಿಭಾಗದ ಮುಖ್ಯಸ್ಥ ಪ್ರೊ. ಪುರುಷೋತ್ತಮಾಚಾರ ವಿಶೇಷ ಭಕ್ತಿಗೀತೆ ಹಾಡಿ ಗಮನ ಸೆಳೆದರು.
ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಚಂದ್ರಕಾಂತ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಗೀತ ವಿಭಾಗದ ವಿದ್ಯಾರ್ಥಿಗಳು ವಿಶೇಷ ಸಂಗೀತ ಕಾರ್ಯಕ್ರಮ ನೀಡಿದರು. ಕಾಲೇಜಿನ ಇಂಗ್ಲಿಷ್‌ ವಿಭಾಗದ ಮುಖ್ಯಸ್ಥ ಅನಿಲ ಅಪ್ರಾಳ್ ಸ್ವಾಗತಿಸಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಅರುಣಾ ಹಿರೇಮಠ ವಂದಿಸಿದರು.

ಉಪಪ್ರಾಚಾರ್ಯರಾದ ಪ್ರೊ. ಪಿ.ಎಚ್. ನರಹಟ್ಟಿ, ಡಾ. ಶೀಲಾಕುಮಾರಿ ದಾಸ, ಪ್ರೊ. ಚನ್ನಮಲ್ಲಿಕಾರ್ಜುನ, ಪ್ರೊ. ಸೂಗಪ್ಪ, ಪ್ರೊ. ವಿಜಯರಾವ್ ದೇಶಪಾಂಡೆ, ರಾಘವೇಂದ್ರ ಕುಲಕರ್ಣಿ, ಪ್ರೊ. ರವಿಕುಮಾರ, ಪ್ರೊ. ವಿರೇಶಕುಮಾರ, ಪ್ರೊ. ತಿಮ್ಮಪ್ಪ, ಪ್ರೊ. ಮಾಲತೇಶ ಈ., ಪ್ರೊ. ರಾಘವೇಂದ್ರ ಸಿ.ಎನ್., ಡಾ. ವಿದ್ಯಾ ಪಾಟೀಲ, ಡಾ. ಪದ್ಮಾವತಿ, ಪ್ರೊ. ಕಲಾವತಿ ಪಾಟೀಲ, ಪ್ರೊ. ಸ್ವಾತಿ ದಿಕ್ಷೀತ್, ಪ್ರೊ. ಅಮೃತ, ಪ್ರೊ. ಶಿವರಂಜನಿ, ಈರಮ್ಮ, ವೀರಯ್ಯಸ್ವಾಮಿ, ಪಾಗುಂಟಪ್ಪ, ಬಸವರಾಜ, ಅರ್ಜುನ ಎಸ್., ಸುರೇಶ ಬಿ. ಆನಂದರೆಡ್ಡಿ, ಕೆಂಚಪ್ಪ, ರಾಮಣ್ಣ, ಶ್ರೀನಿವಾಸ, ಮಹಾದೇವಿ, ಪದ್ಮ, ಹನುಮಂತಿ, ಇಂದಿರಾ, ಕಮಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.