ADVERTISEMENT

ಆರೋಗ್ಯ ಕಾಪಾಡಿಕೊಳ್ಳಲು ಯೋಗಾಸನ ಮುಖ್ಯ: ಡಾ.ಸಿ.ಬಿ. ವೇದಮೂರ್ತಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 13:00 IST
Last Updated 10 ಜನವರಿ 2020, 13:00 IST
ರಾಯಚೂರಿನ ಪೂರ್ಣಿಮಾ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಆಯೋಜಿಸಿದ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು 
ರಾಯಚೂರಿನ ಪೂರ್ಣಿಮಾ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಆಯೋಜಿಸಿದ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು    

ರಾಯಚೂರು:ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಸನ ಮಾಡುವುದು ಮುಖ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಹೇಳಿದರು.

ನಗರದ ಪೂರ್ಣಿಮಾ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಆಯೋಜಿಸಿರುವ ಎಂಟು ದಿನಗಳ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ ಹಾಗೂ ಆರ್ಟ್‌ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಯುವ ನಾಯಕತ್ವ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಇಂತಹ ತರಬೇತಿಗಳಲ್ಲಿ ಪಾಲ್ಗೊಂಡರೆ ವ್ಯಕ್ತಿತ್ವ ವಿಕಸನವಾಗುತ್ತದೆ. ದುಶ್ಚಟ ಹಾಗೂ ಮೊಬೈಲ್‌ಗಳಿಂದ ದೂರವಿರಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಸುಂದರ ಬದುಕು ಕಟ್ಟಿಕೊಳ್ಳಲು ಈ ತರಬೇತಿ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ADVERTISEMENT

ಉದ್ಯಮಿ ಗೋಪಾಲಯ್ಯ ಮಾತಾನಾಡಿ, ‘ನನ್ನಲ್ಲಿ ಸಾಕಾಷ್ಟು ಹಣ ಇದೆ. ಆದರೆ, ಆರೋಗ್ಯದ ತೊಂದರೆ ಇದ್ದು, ಎಷ್ಟು ಹಣ ಇದ್ದರೂ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಿಲ್ಲ. ಆದರೆ ಯೋಗ, ಧ್ಯಾನ ಇನ್ನಿತರ ಇಂತಹ ಶಿಬಿರಗಳಿಂದ ಉತ್ತಮ ಆರೋಗ್ಯ ಪಡೆದು ಜೀವನ ಸಾಗಿಸಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಯೋಗ ಗುರು ಬಿ.ಎಂ ಪಾಟೀಲ ಮಾತನಾಡಿ, ‘ಈ ಶಿಬಿರದ ತರಬೇತಿಯಲ್ಲಿ ಯೋಗ, ಧ್ಯಾನ ಪ್ರಾಣಾಯಾಮದೊಂದಿಗೆ, ನಾಯಕತ್ವ ಗುಣಗಳನ್ನು ಬೆಳೆಸಲು ಬೇಕಾದ ಎಲ್ಲಾ ಅಂಶಗಳನ್ನು ಶ್ರೀ ರವಿಶಂಕರ ಗುರುಜೀ ಅವರ ಮಾರ್ಗದರ್ಶನದಲ್ಲಿ ನೀಡುತ್ತಿದ್ದು, ಉತ್ತಮ ನಾಗಕರೀಕರನ್ನು ವಿದ್ಯಾರ್ಥಿಗಳನ್ನು ಈ ದೇಶಕ್ಕೆ ಕೊಡುಗೆಯಾಗಿ ಕೊಡುತ್ತಿದ್ದೇವೆ’ ಎಂದರು.

ಅಭಿವೃದ್ಧಿ ಮಂಡಳಿ ಸದಸ್ಯ ಬಸವರಾಜ ಕಳಸ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಗ ಶಿಕ್ಷಕ ಮಲ್ಲಿಕಾರ್ಜುನ ಸ್ವಾಮಿ, ರಮೇಶ ಜೈನ್, ರಘುವೀರಸಿಂಗ್, ರಾಘವೇಂದ್ರ ಮೂಲಿಮನಿ ಇದ್ದರು.

ಸ್ವಯಂ ಸೇವಕರಾದ ಅವಿನಾಶ, ಚಂದ್ರಶೇಖರ ದಂಡಿನ್, ನರಸಿಂಹ, ಸಹನಾ ಪಾಟೀಲ, ಧನರಾಜ, ಇನ್ನಿತರ ಸ್ವಯಂ ಸೇವಕರು ಹಾಗೂ ಸುಮಾರು 120 ವಿದ್ಯಾರ್ಥಿಗಳು ಈ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.