ಕನಕಪುರ: ಗ್ರಾಮ ಮಟ್ಟದಲ್ಲಿ ನಾಯಕರನ್ನು ತಯಾರು ಮಾಡಿ ಚುನಾವಣೆಯ ಮೂಲಕವೇ ಅರ್ಹ ಮತ್ತು ದಕ್ಷ ಯುವಕರ ಕೈಗೆ ಅಧಿಕಾರ ನೀಡಿ ರಾಷ್ಟ್ರವನ್ನು ಮುನ್ನಡೆಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ  ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲೇ ಯುವ ಕಾಂಗ್ರೆಸ್ ಚುನಾವಣೆಯನ್ನು ನಡೆಸುತ್ತಿದೆ ಎಂದು ಶಾಸಕ ಡಿ.ಕೆ. ಶಿವಕುಮಾರ್ ಹೇಳಿದರು.
 ಪಟ್ಟಣದ ಹೊರವಲಯದ ವಾಸು ತೋಟದಲ್ಲಿ ಜರುಗಿದ ಯುವ ಕಾಂಗ್ರೆಸ್ ಚುನಾವಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ವರಿಗೂ ಪಕ್ಷದಲ್ಲಿ ಸ್ಥಾನಮಾನ ಸಿಗಬೇಕೆಂದು ದೃಷ್ಟಿಯಿಂದ ಕಾಂಗ್ರೆಸ್‌ನ ಯುವ ನೇತಾರ ರಾಹುಲ್ ಗಾಂಧಿಯವರು ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲೇ ಯುವ ಕಾಂಗ್ರೆಸ್ ಚುನಾವಣೆ ನಡೆಸುತ್ತಿದ್ದಾರೆ ಎಂದು ಹೇಳಿದರು.
 ಯುವ ಮುಖಂಡ ಡಿ.ಕೆ ಸುರೇಶ್ ಮಾತನಾಡಿ ಪ್ರಸಕ್ತ ಯುವ ಕಾಂಗ್ರೆಸ್ ಚುನಾವಣೆ ಬಹಳ ಶಿಸ್ತಿನಿಂದ ನಡೆಯುತ್ತದೆ. ಕನಕಪುರ ಮತ್ತು  ಕೋಡಿಹಳ್ಳಿ ಕೇಂದ್ರ ಸ್ಥಾನದಲ್ಲಿ ಮತದಾನ ಕೇಂದ್ರಗಳಿರುತ್ತವೆ ಎಂದು ತಿಳಿಸಿದರು.  
 ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ರವಿ, ಪುರಸಭಾ ಅಧ್ಯಕ್ಷ ಆರ್. ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಎನ್. ದಿಲೀಪ್, ಎಂ.ಡಿ. ವಿಜಯದೇವು, ಮುಖಂಡರಾದ ಹೊನ್ನಿಗನಹಳ್ಳಿ ಶ್ರಿಕಂಠು, ಮುನಿಯಪ್ಪ, ಪುಟ್ಟಮಾದು ಜಿ.ಪಂ. ಉಪಾಧ್ಯಕ್ಷೆ ಮಾದೇವಿ, ಸದಸ್ಯ ವೆಂಕಟೇಶಯ್ಯ, ತಾ.ಪಂ. ಅಧ್ಯಕ್ಷೆ ಸುಕನ್ಯ ರಂಗಸ್ವಾಮಿ, ಉಪಾಧ್ಯಕ್ಷ ವಿಶ್ವಪ್ರಿಯ, ಸದಸ್ಯ ಎಂ.ಪುರುಷೋತ್ತಮ್, ಪುರಸಭೆ ಸದಸ್ಯ ಜೈರಾಮು, ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಂಪರಾಜು, ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
 
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.