ADVERTISEMENT

ಡಾ.ಜಗಜೀವನ್ ರಾಮ್ ಜನ್ಮದಿನಾಚರಣೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 19:30 IST
Last Updated 5 ಏಪ್ರಿಲ್ 2012, 19:30 IST

ಮಾಗಡಿ: ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಾಬು ಜಗಜೀವನ್ ರಾಮ್ ಅವರ ಜನ್ಮದಿನವನ್ನು ಬುಧವಾರ ಆಚರಿಸಲಾಯಿತು.

ತಹಶೀಲ್ದಾರ್ ನಿರಂಜನ ಅವರು ಕಾರ್ಯಕ್ರಮ ಉದ್ಘಾಟಿಸಿ, ಬಾಬು ಜಗಜೀವನ್ ರಾಮ್ ಅವರು ದೇಶಕ್ಕೆ ಸಲ್ಲಿಸಿದ ಕೊಡುಗೆ ಅವಿಸ್ಮರಣೀಯ ಎಂದು ನುಡಿದರು.

ತಾ.ಪಂ ಸದಸ್ಯ ಜಿ.ಕೃಷ್ಣ, ತಾ.ಪಂ. ಮಾಜಿ ಸದಸ್ಯ ಸಿ,ಜಯರಾಮ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದೊಡ್ಡಯ್ಯ, ಕಾಂಗ್ರೆಸ್ ಮುಖಂಡರಾದ ಬಿ.ವಿ. ಜಯರಾಮು, ಮಂಜೇಶ್ ಕುಮಾರ್, ಬಿಜೆಪಿ ಮುಖಂಡ ಕಲ್ಕೆರೆ ಶಿವಣ್ಣ, ಜೆಡಿಎಸ್ ಮುಖಂಡ ಬೆಳ್ಳಿಯಪ್ಪ, ಮಹದೇವ್, ಕುಮಾರ್, ಸ್ವಾಮಿ, ದೊಡ್ಡಿಲಕ್ಷ್ಮಣ್, ಹಿರಿಯರಾದ ಎಲ್.ಎನ್.ಸ್ವಾಮಿ, ಕಲಾವಿದ ಹನುಮಂತಯ್ಯ, ಪುರಸಭೆಯ ಮಾಜಿ ಅಧ್ಯಕ್ಷ ರಂಗಹನುಮಯ್ಯ, ರುಕ್ಮಿಣಿ ರಂಗನಾಥ್, ತಾಲ್ಲೂಕು ದ.ಸಂ.ಸ ಸಂಚಾಲಕ ಗಂಗಾಧರ, ಮುದ್ದಮ್ಮ, ಗಿರೀಶ್ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.