ADVERTISEMENT

‘ಯಡಿಯೂರಪ್ಪ ಮುಂದಿನ ಸಿಎಂ’

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 7:14 IST
Last Updated 22 ಅಕ್ಟೋಬರ್ 2017, 7:14 IST

ಕುದೂರು(ಮಾಗಡಿ): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವತಿಯಿಂದ150ಕ್ಕೂ ಹೆಚ್ಚು ಶಾಸಕರು ಆಯ್ಕೆಯಾಗಿ, ಬಿ.ಎಸ್.ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ಮುಖಂಡ ರಂಗಧಾಮಯ್ಯ ತಿಳಿಸಿದರು. ಸುಗ್ಗನಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಮನೆ ಮನೆ ಬಿಜೆಪಿ ಅಭಿಯಾನ ನಡೆಸಲು ಈಗಾಗಲೇ ಎಲ್ಲೆಡೆ ನಾಯಕರು ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸಲಾಗುವುದು ಎಂದರು.

ನೆಲಮಂಗಲದ ಮುಖಂಡ ಎಂ.ವಿ.ನಾಗರಾಜು ಮಾತನಾಡಿ, ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಸಂಘಟಿಸಲು ಈಗಾಗಲೇ ಹೈಕಮಾಂಡ್ ರಂಗಧಾಮಯ್ಯ ಅವರಿಗೆ ಸೂಚನೆ ನೀಡಿದೆ. ತಾಲ್ಲೂಕಿನ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ ಎಂದರು. ರಾಜ್ಯ ಸಮಿತಿ ಸದಸ್ಯ ಹಲಸಬೆಲೆ ಶಿವಕುಮಾರ್ ಮಾತನಾಡಿ, ಈ ಬಾರಿ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ ಎಂದರು.

ADVERTISEMENT

ಮುಖಂಡ ಟಿ.ಸಿ.ನಾರಾಯಣಸ್ವಾಮಿ, ಗೋಪಾಲ, ಎಂ.ಟಿ.ಶಿವಣ್ಣ, ವಕೀಲ ರವಿಕುಮಾರ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಜಯಸಿಂಹ, ಬಾಲಾಜಿ, ರಾಜಣ್ಣ, ವೆಂಕಟೇಶ್, ಎಸ್ಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ, ಟಿ.ಬಿ.ರವಿ. ಟಿ.ಸಿ.ರಮೇಶ್, ದಯಾನಂದ್, ರವೀಂದ್ರ, ಜೋಗಿಪಾಳ್ಯದ ನಾಗರಾಜು, ಕುಮಾರ್, ಆನಂದ್, ಲೋಕೇಶ್, ಸ್ವಾಮಿ,ಜಗದೀಶ್, ವಿಜಯ್, ಜಯರಾಜ್, ರುದ್ರಾರಾಧ್ಯ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.