ADVERTISEMENT

‘ಸಮಾನತೆಗೆ ಹೋರಾಟ ನಿರಂತರ’

ರಾಮನಗರ: ಮಾನವ ಹಕ್ಕುಗಳ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 8:14 IST
Last Updated 14 ಡಿಸೆಂಬರ್ 2013, 8:14 IST

ರಾಮನಗರ: ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಅದರ ವಿರುದ್ಧದ ಹೋರಾಟ ನಿರಂತರ ವಾಗಿ ನಡೆ ದುಕೊಂಡು ಬಂದಿದೆ ಎಂದು ಜಿಲ್ಲಾ ಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಂಟಿ ಯಾಗಿ ನಗರದ ಗೌಸಿಯಾ ಎಂಜಿನಿ ಯರಿಂಗ್‌ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸಂವಿಧಾನ ಪಿತಾಮಹ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಮೇಲೆ ವಿವಿಧ ಸಂದರ್ಭದಲ್ಲಿ ನಡೆದ ಮಾನವ ಹಕ್ಕು ಗಳ ಉಲ್ಲಂಘನೆಯನ್ನು ಪ್ರತಿಭಟಿಸಿ ಅವರು ಹೋರಾಟದ ಕೈಗೊಂಡರಿಂದ ಅವರು ಮಹಾನ್‌ ವ್ಯಕ್ತಿಗಳಾದರು ಎಂದರು.
‘ಬಸವಣ್ಣ, ಬುದ್ಧ, ಮಹಾವೀರ ಅವರ ಧಾರ್ಮಿಕ ಹೋರಾಟವೂ ಸಮ ಸಮಾಜ ಮತ್ತು ಮಾನವ ಹಕ್ಕಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿಯೇ ನಡೆ ದದ್ದು’ ಎಂದು ಅವರು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಕೆ. ಪ್ರಹ್ಲಾದ್, ಪ್ರತಿಯೊಂದು ರಾಷ್ಟ್ರಗಳ ಲ್ಲಿಯೂ ಅಲ್ಲಿನ ಕಾನೂನಿನ ಚೌಕಟ್ಟಿನ ಡಿಯಲ್ಲಿ ಜೀವಿಸುವ ಹಕ್ಕು, ಹೆಸರು ಮತ್ತು ರಾಷ್ಟ್ರೀಯತೆ ಪಡೆಯುವ ಹಕ್ಕು, ಧಾರ್ಮಿಕ ಹಕ್ಕು, ಆರೋಗ್ಯ, ಆಹಾರ, ಶಿಕ್ಷಣ, ಸಾಮಾಜಿಕ ಭದ್ರತೆ, ಜೀತ ಪದ್ಧ ತಿಯ ನಿರ್ಮೂಲನಾ ಹಕ್ಕುಗಳನ್ನು ನೀಡಲಾಗಿದೆ. ಅದನ್ನು ಗೌರವಿಸಬೇ ಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಸಂಪನ್ಮೂಲ ವ್ಯಕ್ತಿ ವಕೀಲ ಚಾನ್ ಪಾಷಾ ಮಾತ ನಾಡಿದರು. ಗೌಸಿಯಾ ಎಂಜಿನಿಯರಿಂಗ್ ಕಾಲೇ ಜಿನ ಪ್ರಾಂಶುಪಾಲ ಡಾ.ಮಹಮದ್ ಹನೀಫ್, ವಕೀಲರ ಸಂಘದ ಅಧ್ಯಕ್ಷ ಎಂ.ಎಚ್. ಕುಮಾರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಡಿ. ಲಿಂಗರಾಜು, ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಎಚ್. ಹೊಸಗೌಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.