ಹಾರೋಹಳ್ಳಿ: ಆಟವಾಡುತ್ತಿದ್ದ ಮಗುವಿಗೆ ಕಾರು ಗುದ್ದಿ ಸಾವನ್ನಪ್ಪಿದೆ. ನಾಗಮಣಿ (6) ಮೃತ ಬಾಲಕಿ. ಈ ಘಟನೆ ಖಂಡಿಸಿ ಮಗುವಿನ ಪೋಷಕರು ಕಗ್ಗಲೀಪುರ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು.
ಅದೇ ಗ್ರಾಮದ ಮಹಿಳೆಯೊಬ್ಬರು ಕಾರು ಚಾಲನೆ ಕಲಿಯುವ ಸಂದರ್ಭದಲ್ಲಿ ಮೊದಲು ಬೈಕ್‌ಗೆ ಗುದ್ದಿ, ನಂತರ ಕಾಂಪೌಂಡ್ ಗೋಡೆಗೂ ಗುದ್ದಿದ್ದಾರೆ. ಅಲ್ಲೇ ಆಟವಾಡುತ್ತಿದ್ದ ಬಾಲಕಿ ಮೇಲೂ ಕಾರು ಹರಿದಿದೆ.
ಮಹಿಳೆ ನಿರ್ಲಕ್ಷ್ಯ ವಿರುದ್ಧ ಪೋಷಕರು ಪ್ರತಿಭಟನೆ ನಡೆಸಿದರು. ಪೊಲೀಸರ ಮನವೊಲಿಕೆ ನಂತರ ಪ್ರತಿಭಟನೆ ಕೈಬಿಟ್ಟರು. ಕಗ್ಗಲೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.