ADVERTISEMENT

ಬಿಡದಿ: ಕೃಷಿ ಚಟುವಟಿಕೆ ಚುರುಕು

​ಪ್ರಜಾವಾಣಿ ವಾರ್ತೆ
Published 4 ಮೇ 2021, 4:47 IST
Last Updated 4 ಮೇ 2021, 4:47 IST
ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ ರೈತರು
ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ ರೈತರು   

ಬಿಡದಿ: ಹೋಬಳಿಯ ಸುತ್ತಮುತ್ತ ಕಳೆದ ಒಂದು ವಾರದಿಂದ ಬಿದ್ದ ಮಳೆಯಿಂದ ಅಲ್ಪಾವಧಿ ಬೆಳೆಗಳಾದ ಅವರೆ, ಅಲಸಂದಿ, ಜೋಳ ಬಿತ್ತನೆ ಕಾರ್ಯ ಭರದಿಂದ ನಡೆಯುತ್ತಿದೆ.

ಈಗಾಗಲೇ, ಬಿಡದಿ ಸುತ್ತಮುತ್ತಲಿನ ಪ್ರದೇಶದ ರೈತರು ಸಂತಸದಿಂದ ಕೋವಿಡ್-19 ಲೆಕ್ಕಿಸದೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಈಗ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಕೋವಿಡ್‌ ಸಂಕಷ್ಟದಿಂದ ರೈತರು ಕಂಗಾಲಾಗಿದ್ದಾರೆ. ಕೃಷಿ ಉತ್ಪನ್ನಗಳ ಧಾರಣೆಯೂ ಕುಸಿತಗೊಂಡಿದೆ. ಅಲ್ಪಾವಧಿ ಬೆಳೆಗಳಾದರೂ ಕೈಸೇರುತ್ತವೆ ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ. ಈಗಾಗಲೇ ಕೃಷಿ ಚಟುವಟಿಕೆ ನಡೆಯುತ್ತಿದ್ದು, ಇನ್ನೆರಡು ವಾರಗಳಲ್ಲಿ ಅಲ್ಪಾವಧಿ ಬೆಳೆಗಳ ಬಿತ್ತನೆ ಕಾರ್ಯ ಮುಗಿಯುವ ನಿರೀಕ್ಷೆ ಇದೆ.

ADVERTISEMENT

‘ಕೋವಿಡ್‌ನಂತಹ ಮಾರಕ ರೋಗದಿಂದ ಯಾವುದೇ ಬೆಳೆಯೂ ರೈತರ ಕೈಹಿಡಿಯಲಿಲ್ಲ. ಅಧಿಕ ಲಾಭಗಳಿಸುವುದಕ್ಕೂ ಆಗಿಲ್ಲ. ಬೆಳೆಗಳನ್ನು ಮಾರುಕಟ್ಟೆಗೆ ಹಾಕುವುದಕ್ಕೂ ಅವಕಾಶ ಸಿಗಲಿಲ್ಲ. ಅಲ್ಪಾವಧಿ ಬೆಳೆ ಕೈಹಿಡಿಯಬಹುದು. ಉತ್ತಮ ಬೆಲೆ ಸಿಗುತ್ತದೆಂಬ ವಿಶ್ವಾಸವಿದೆ’ ಎಂದರು ರೈತ ರಾಮಣ್ಣ.

ಇತ್ತೀಚೆಗೆ ರೈತರು ವೈಜ್ಞಾನಿಕ ಬೇಸಾಯಕ್ಕೆ ಮೊರೆ ಹೋಗಿದ್ದಾರೆ. ಉತ್ತಮವಾದ ಹೈಬ್ರೀಡ್ ಬಿತ್ತನೆ ಬೀಜ ಬಂದಿರುವುದರಿಂದ ಅಧಿಕ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.