ADVERTISEMENT

ಅಕ್ಕಮಹಾದೇವಿ ಸ್ತ್ರೀವಾದಿ ಚಳವಳಿಯ ‍ಪ್ರತಿಪಾದಕಿ: ಇಮ್ಮಡಿ ಬಸವರಾಜ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 6:53 IST
Last Updated 17 ಏಪ್ರಿಲ್ 2022, 6:53 IST
ಮಾಗಡಿ ಪಟ್ಟಣದ ಬಸವೇಶ್ವರಸ್ವಾಮಿ ದೇವಾಲಯದಲ್ಲಿ ಅಕ್ಕನ ಬಳಗದಿಂದ ನಡೆದ ಅಕ್ಕಮಹಾದೇವಿ ಜಯಂತ್ಯುತ್ಸವದಲ್ಲಿ ಇಮ್ಮಡಿ ಬಸವರಾಜ ಸ್ವಾಮೀಜಿ ಹಾಗೂ ಬಳಗದ ಪದಾಧಿಕಾರಿಗಳು ಅಕ್ಕನ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು
ಮಾಗಡಿ ಪಟ್ಟಣದ ಬಸವೇಶ್ವರಸ್ವಾಮಿ ದೇವಾಲಯದಲ್ಲಿ ಅಕ್ಕನ ಬಳಗದಿಂದ ನಡೆದ ಅಕ್ಕಮಹಾದೇವಿ ಜಯಂತ್ಯುತ್ಸವದಲ್ಲಿ ಇಮ್ಮಡಿ ಬಸವರಾಜ ಸ್ವಾಮೀಜಿ ಹಾಗೂ ಬಳಗದ ಪದಾಧಿಕಾರಿಗಳು ಅಕ್ಕನ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು   

ಮಾಗಡಿ: ಪಟ್ಟಣದ ಅರಳೆಪೇಟೆ ಬಸವೇಶ್ವರ ದೇವಾಲಯದ ಆವರಣದಲ್ಲಿ ಅಕ್ಕನ ಬಳಗ, ವೀರಶೈವ ಲಿಂಗಾಯತ ಮಂಡಳಿ, ವಿನಾಯಕ ಯುವಕರ ಸಂಘದಿಂದ ಶನಿವಾರ ಅಕ್ಕಮಹಾದೇವಿ ಜಯಂತ್ಯುತ್ಸವ ನಡೆಯಿತು.

ಜಡೇದೇವರ ಮಠಾಧ್ಯಕ್ಷ ಇಮ್ಮಡಿ ಬಸವರಾಜ ಸ್ವಾಮೀಜಿ ಮಾತನಾಡಿ, ಅಕ್ಕಮಹಾದೇವಿ ಕನ್ನಡದ ಪ್ರಥಮ ಕವಿಯತ್ರಿ. ವಚನ ಸಾಹಿತ್ಯದ ಪ್ರಮುಖರಲ್ಲಿ ಒಬ್ಬರು. ಅಕ್ಕನವರನ್ನು ಸ್ತ್ರೀವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ ಗುರುತಿಸಬಹುದಾಗಿದೆ ಎಂದರು.

ಶ್ರೇಷ್ಠ ವಚನಗಳನ್ನು ರಚಿಸಿರುವ ಅವರು ಕನ್ನಡ ಸಾರಸ್ವತ ಲೋಕ ಮತ್ತು ಆಧ್ಯಾತ್ಮಿಕ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಕನ್ನಡ ಸಾಹಿತ್ಯದ ಮೊದಲ ಬಂಡಾಯ ಕವಿಯತ್ರಿಯಾಗಿದ್ದಾರೆ ಎಂದು ಹೇಳಿದರು.

ADVERTISEMENT

ಚೆನ್ನಮಲ್ಲಿಕಾರ್ಜುನ ಅಂಕಿತನಾಮದಲ್ಲಿ 430 ವಚನಗಳನ್ನು ರಚಿಸಿದ್ದಾರೆ. ಮರವಿದ್ದು ಫಲವೇನು ನೆರಳಿಲ್ಲದನ್ನಕ್ಕ, ಧನವಿದ್ದು ಫಲವೇನು ದಯೆವಿಲ್ಲದನ್ನಕ್ಕ? ವಚನಗಳಲ್ಲಿ ಬಂಡಾಯದ ಧ್ವನಿಯಿದೆ. ಅಕ್ಕಮಹಾದೇವಿ ರಚಿಸಿರುವ ವಚನಗಳನ್ನು ಎಲ್ಲರೂ ಅಧ್ಯಯನ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಪುರಸಭೆ ಸದಸ್ಯರಾದ ಶಿವರುದ್ರಮ್ಮ ವಿಜಯಕುಮಾರ್‌, ಅನಿಲ್‌ಕುಮಾರ್‌, ದೀಪಾ, ಮಾಜಿ ಸದಸ್ಯರಾದ ಮಹೇಶ್‌, ರವಿಶಂಕರ್‌, ವಕೀಲ ಕೆ.ಎಸ್‌. ಪ್ರಕಾಶ್‌, ಅಕ್ಕನ ಬಳಗದ ಅಧ್ಯಕ್ಷೆ ಲಲಿತಾ ರಮೇಶ್‌, ಕಾರ್ಯದರ್ಶಿ ಜಯಂತಿ ರಾಜಣ್ಣ, ಖಜಾಂಚಿ ಮಮತಾ, ಗೌರವಾಧ್ಯಕ್ಷೆ ವಿಶಾಲಾಕ್ಷಿ, ಆಶಾ, ಗಾಯತ್ರಿ, ಉಮಾ, ಭವಾನಿ, ಲತಾ, ಪ್ರೇಮಾ, ಶಿಲ್ಪಾ ಮಾತನಾಡಿದರು.

ಅಕ್ಕನ ಬಳಗದ ಸದಸ್ಯರು ವಚನ ಗಾಯನ ನಡೆಸಿಕೊಟ್ಟರು. ವೀರಶೈವ ಮಂಡಳಿ ಅಧ್ಯಕ್ಷ ರುದ್ರಮೂರ್ತಿ, ಮುಖಂಡರಾದ ಮಹಂತೇಶ್‌, ರೇಣುಕಾರಾಧ್ಯ, ಪ್ರಕಾಶ್‌, ಆನಂದಪ್ಪ, ನಟರಾಜ್‌, ಉಮಾ ಮಹೇಶ್‌ ಇದ್ದರು. ಅಕ್ಕಮಹಾದೇವಿ ವಿಗ್ರಹಕ್ಕೆ ಬೆಳ್ಳಿಯ ಕವಚ ಅಲಂಕಾರ ಮಾಡಿ ಪೂಜಿಸಲಾಯಿತು. ಪಾನಕ, ಮಜ್ಜಿಗೆ ವಿತರಿಸಿದರು. ಸಾಮೂಹಿಕ ದಾಸೋಹ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.