ADVERTISEMENT

ಮಾಗಡಿ: ಫಸಲ್‌ ಬೀಮಾ ವಿಮಾ ಯೋಜನೆಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2023, 13:32 IST
Last Updated 13 ಆಗಸ್ಟ್ 2023, 13:32 IST
 ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಾಗಡಿ: ತಾಲ್ಲೂಕಿನ ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಬಿಮಾ ವಿಮಾ ಯೋಜನೆ ಮುಂಗಾರು 2023ರಲ್ಲಿ ಸಣ್ಣ ಕಂತು ಕಟ್ಟಿ ದೊಡ್ಡ ಲಾಭ ಪಡೆಯಲು ರೈತರು ಮುಂದಾಗಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದಶಕಿ ವಿಜಯಾ ಸವಣೂರು ಹೇಳಿದರು.

ಫಸಲ್‌ ಬಿಮಾ ವಿಮಾ ಯೋಜನೆಯಡಿ 2023ರ ಮುಂಗಾರು ಹಂಗಾಮಿಗೆ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಅಧಿಸೂಚಿತ ಬೆಳೆಗಳು. ಕಸಬಾ ಹೋಬಳಿ; ಅಲಸಂದೆ, ತೊಗರಿ, ಮುಸುಕಿನ ಜೋಳ, ರಾಗಿ, ಹುರಳಿ ಬೆಳೆ.

ಕುದೂರು ಹೋಬಳಿ

ADVERTISEMENT

ಅಲಸಂದೆ, ಕೆಂಪು ಮೆಣಸಿನ ಕಾಯಿ, ತೊಗರಿ, ಭತ್ತ, ಮುಸುಕಿನ ಜೋಳ, ಹುರಳಿ ಬೆಳೆ. ತಿಪ್ಪಸಂದ್ರ ಹೋಬಳಿ: ಅಲಸಂದೆ, ತೊಗರಿ, ಭತ್ತ, ಹುರುಳಿ ಮಾಡಬಾಳ್‌, ಸೋಲೂರು ಹೋಬಳಿಗೂ ಇದೆ ಬೆಳೆ ಅನ್ವಯಿಸಲಿವೆ. ವಿಮಾಯೋಜನೆಗೆ ಅರ್ಜಿ ಸಲ್ಲಿಸಿ ಸಾಮಾನ್ಯ ವಿಮಾ ಮೊತ್ತವನ್ನು ತುಂಬಲು ಆಗಸ್ಟ್‌ 16 ಕೊನೆಯ ದಿನವಾಗಿದೆ.

ರೈತರು ತಾವು ಬೆಳೆಗೆ ಮಾತ್ರ ಬೆಳೆವಿಮೆ ಪ್ರಿಮಿಯಂ ಪಾವತಿಸಬೇಕು. ಬೆಳೆ ವಿವರವನ್ನು ಕಡ್ಡಾಯವಾಗಿ ಬೆಳೆ ಸಮೀಕ್ಷೆಯಲ್ಲಿ ದಾಖಲಿಸಬೇಕು. ಹೆಚ್ಚಿನ ಮಾಹಿತಿಗೆ ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ವಿಮಾಸಂಸ್ಥೆಯ ಪ್ರತಿನಿಧಿಗಳು, ವಾಣಿಜ್ಯ ಬ್ಯಾಂಕ್‌, ಸಾಮಾನ್ಯ ಸೇವಾ ಕೇಂದ್ರ, ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿ ಪಡೆಯಬಹುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.