
ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸೇವೆಯಲ್ಲಿ ತೊಡಗಿಸಿಕೊಂಡಿರುವ ರಾಮನಗರದ ಅಮೃತ ವಿಕಲಚೇತನ ಟ್ರಸ್ಟ್ ಹಾಗೂ ಅಮೃತ ವೃದ್ಧಾಶ್ರಮ ಸಂಸ್ಥೆಗೆ ಡಬ್ಲ್ಯೂ.ಬಿ.ಆರ್ ಸಂಸ್ಥೆಯು ಮುಂಬೈನಲ್ಲಿ ಇತ್ತೀಚೆಗೆ ‘ಸೋಷಿಯಲ್
ರಾಮನಗರ: ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸೇವೆಯಲ್ಲಿ ತೊಡಗಿಸಿಕೊಂಡಿರುವ ರಾಮನಗರದ ಅಮೃತ ವಿಕಲಚೇತನ ಟ್ರಸ್ಟ್ ಹಾಗೂ ಅಮೃತ ವೃದ್ಧಾಶ್ರಮ ಸಂಸ್ಥೆಗೆ ಡಬ್ಲ್ಯೂ.ಬಿ.ಆರ್ (ವರ್ಲ್‌ವೈಡ್ ಬಿಸಿನೆಸ್ ರಿಸರ್ಚ್) ಸಂಸ್ಥೆಯು ಮುಂಬೈನಲ್ಲಿ ಇತ್ತೀಚೆಗೆ ‘ಸೋಷಿಯಲ್ ಇಂಪ್ಯಾಕ್ಟ್ ಅವಾರ್ಡ್ ಫಾರ್ ಡಿಸೆಬಿಲಿಟಿ ಆ್ಯಂಡ್ ಸೀನಿಯರ್ ಸಿಟಿಜನ್’ ಪ್ರಶಸ್ತಿ ನೀಡಿ ಗೌರವಿಸಿತು.
ಟ್ರಸ್ಟ್ ಹಾಗೂ ವೃದ್ಧಾಶ್ರಮದ ಅಧ್ಯಕ್ಷ ಆರ್. ನಿರಂಜನ್ ಹಾಗೂ ಮಾನಸ ಅವರಿಗೆ ಕಿರುತೆರೆ ನಟಿ ಅಮೃತ ಸುಲೂಜ ರಾಯ್‌ಚಂದ್ ಪ್ರಶಸ್ತಿ ವಿತರಿಸಿದರು.
‘ಟ್ರಸ್ಟ್ ಸೇವೆಯನ್ನು ಗುರುತಿಸಿ ಡಬ್ಲ್ಯೂಬಿಆರ್ ಸಂಸ್ಥೆಯು ಪ್ರಶಸ್ತಿ ನೀಡಿರುವುದು ನಮ್ಮ ಜವಾಬ್ದಾರಿ ಹಾಗೂ ಹೊಣೆಗಾರಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ. ಹೆಚ್ಚಿನ ಸಮಾಜಮುಖಿ ಕೆಲಸ ಮಾಡಲು ಪ್ರೇರಣೆ ನೀಡಿದೆ’ಎಂದು ಸಂಸ್ಥೆಯ ಅಧ್ಯಕ್ಷ ಆರ್. ನಿರಂಜನ್ ಸಂತಸ ವ್ಯಕ್ತಪಡಿಸಿದ್ದಾರೆ.
ಟ್ರಸ್ಟಿನ ಕಾರ್ಯದರ್ಶಿ ಟಿ. ರಮೇಶ್, ಖಜಾಂಚಿ ಪಿ. ಸಪ್ನಾ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.