ADVERTISEMENT

ಬಾಚೇನಹಟ್ಟಿ ಹಾಲು ಡೇರಿಗೆ ₹1.4 ಲಕ್ಷ ನಿವ್ವಳ ಲಾಭ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 13:26 IST
Last Updated 25 ಸೆಪ್ಟೆಂಬರ್ 2019, 13:26 IST
ಮಾಗಡಿ ಬಾಚೇನಹಟ್ಟಿ ಡೈರಿ ಸರ್ವಸದಸ್ಯರ ಸಭೆಯಲ್ಲಿ ಅಧ್ಯಕ್ಷೆ ಸವಿತಾ.ಎಸ್‌.ಮಾರುತಿ ಮಾತನಾಡಿದರು.
ಮಾಗಡಿ ಬಾಚೇನಹಟ್ಟಿ ಡೈರಿ ಸರ್ವಸದಸ್ಯರ ಸಭೆಯಲ್ಲಿ ಅಧ್ಯಕ್ಷೆ ಸವಿತಾ.ಎಸ್‌.ಮಾರುತಿ ಮಾತನಾಡಿದರು.   

ಮಾಗಡಿ: ‘ಮಹಿಳೆಯರು ಮನೆಯಿಂದ ಹೊರಗೆ ಬಂದು ಹಸುಗಳನ್ನು ಸಾಕಿ ಡೈರಿಗೆ ಹಾಲು ಹಾಕುವ ಮೂಲದ ತಮ್ಮ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಭದ್ರಗೊಳಿಸಿಕೊಳ್ಳಲು ಮುಂದಾಗಬೇಕು’ ಎಂದು ಮಹಿಳಾ ಡೈರಿ ಅಧ್ಯಕ್ಷೆ ಸವಿತಾ.ಎಸ್‌.ಮಾರುತಿ ತಿಳಿಸಿದರು.

ಬಾಚೇನಹಟ್ಟಿಯಲ್ಲಿ ಬುಧವಾರ ನಡೆದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿಯಮಿತದ 2018–19ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ನಮ್ಮ ಸಂಘದಲ್ಲಿ 102 ಮಹಿಳೆಯರು ಸದಸ್ಯರಿದ್ದಾರೆ. 30 ಮಹಿಳೆಯರು ಮಾತ್ರ ಹಸುಗಳನ್ನು ಸಾಕಿದ್ದು ನಿತ್ಯ 400 ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ಸಂಘದಲ್ಲಿ ₹6.60 ಲಕ್ಷ ಉಳಿತಾಯ ಮಾಡಿದ್ದೇವೆ. ಎರಡು ವರ್ಷಗಳಿಂದ ₹90 ಸಾವಿರ ಬೋನಸ್‌ ನೀಡಿದ್ದೇವೆ. ₹1.4 ಲಕ್ಷ ನಿವ್ವಳ ಲಾಭ ಬಂದಿದೆ. ನಿಮ್ಮೆಲ್ಲರ ಸಹಕಾರದಿಂದ ಸಂಘವನ್ನು ಪ್ರಗತಿಯತ್ತ ಕೊಂಡೊಯ್ಯಲಾಗುವುದು’ ಎಂದರು.

ADVERTISEMENT

ಉಪಾಧ್ಯಕ್ಷೆ ನರಸಮ್ಮ, ನಿರ್ದೇಶಕರಾದ ಜಯಮ್ಮ, ಮಂಗಳಮ್ಮ, ಮುನಿರಂಗಮ್ಮ, ರಾಧಮ್ಮ, ರುಕ್ಕಮ್ಮ, ಲಕ್ಷ್ಮಮ್ಮ, ಸೀತಮ್ಮ, ಲಕ್ಷ್ಮೀ, ಗಂಗಮ್ಮ, ಗೌರಮ್ಮ, ಪದ್ಮ ಮಾತನಾಡಿದರು.

ಮುಖ್ಯಕಾರ್ಯನಿರ್ವಾಹಕಿ ಲಕ್ಷ್ಮಮ್ಮ ನೀಲಕಂಠಯ್ಯ ಸಭೆಯಲ್ಲಿ ನಡಾವಳಿಗಳು ಮತ್ತು ಆಡಿಟ್‌ ವರದಿಯನ್ನು ಓದಿ ಹೇಳಿ, ದಾಖಲಿಸದರು. ಹಾಲು ಪರೀಕ್ಷಕಿ ಗೀತಾಹನುಮಂತ ಹಾಗೂ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.