ADVERTISEMENT

ಮಾಗಡಿ: ಜಾತಿ ಸಮೀಕ್ಷೆಯಲ್ಲಿ ಮಡಿವಾಳ ಎಂದೇ ನಮೂದಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 2:16 IST
Last Updated 15 ಸೆಪ್ಟೆಂಬರ್ 2025, 2:16 IST
ಟಿ.ಎಂ.ಶ್ರೀನಿವಾಸ್
ಟಿ.ಎಂ.ಶ್ರೀನಿವಾಸ್   

ಮಾಗಡಿ: ಸೆ.22ರಿಂದ 15 ನಡೆಯುವ ಹಿಂದುಳಿದ ವರ್ಗಗಳ ಆಯೋಗದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಮಡಿವಾಳ ಸಮುದಾಯ ಮಡಿವಾಳ ಎಂದೇ ನಮೂದಿಸುವಂತೆ ತಾಲ್ಲೂಕು ಮಾಚಿದೇವ ಮಡಿವಾಳರ ಸಂಘದ ಅಧ್ಯಕ್ಷ ಟಿ.ಎಂ.ಶ್ರೀನಿವಾಸ್ ಮನವಿ ಮಾಡಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಜಾತಿ ಕಲಂನಲ್ಲಿ ಉಪ ಪಂಗಡ ಬಗ್ಗೆ ಮಾಹಿತಿ ಇದ್ದರೆ ನಮೂದಿಸಬೇಕು. ಇಲ್ಲದಿದ್ದರೆ ಮಡಿವಾಳ ನಮೂದಿಸಬೇಕು ಎಂದು ತಿಳಿಸಿದರು.

ತಮ್ಮ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ನಿಖರ ಮಾಹಿತಿ ನೀಡಬೇಕು. ಪ್ರತಿ ಗ್ರಾಮಕ್ಕೂ ಈ ಮಾಹಿತಿಯನ್ನು ನೀಡುವ ಜವಾಬ್ದಾರಿಯನ್ನು ಮುಖಂಡರು‌ ಸ್ವಯಂ ಪ್ರೇರಿತವಾಗಿ ಮಾಡಬೇಕು ಎಂದು ಸೂಚಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.