ADVERTISEMENT

ಒಂಟಿ ಸಲಗ ದಾಳಿ: ಬಾಳೆ ತೋಟ ಧ್ವಂಸ

ಒಂಟಿ ಸಲಗ ದಾಳಿ: ಬಾಳೆ ತೋಟ ಧ್ವಂಸ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 10:44 IST
Last Updated 23 ಜುಲೈ 2024, 10:44 IST
ಚನ್ನಪಟ್ಟಣ ತಾಲ್ಲೂಕಿನ ಅಕ್ಕೂರು ಹೊಸಹಳ್ಳಿ ಗ್ರಾಮದಲ್ಲಿ ಒಂಟಿ ಸಲಗ ದಾಳಿ ನಡೆಸಿ ಧ್ವಂಸ ಮಾಡಿರುವ ಬಾಳೆತೋಟ
ಚನ್ನಪಟ್ಟಣ ತಾಲ್ಲೂಕಿನ ಅಕ್ಕೂರು ಹೊಸಹಳ್ಳಿ ಗ್ರಾಮದಲ್ಲಿ ಒಂಟಿ ಸಲಗ ದಾಳಿ ನಡೆಸಿ ಧ್ವಂಸ ಮಾಡಿರುವ ಬಾಳೆತೋಟ   

ಚನ್ನಪಟ್ಟಣ: ತಾಲ್ಲೂಕಿನ ಅಕ್ಕೂರು ಹೊಸಹಳ್ಳಿ ಗ್ರಾಮದಲ್ಲಿ ಒಂಟಿ ಸಲಗವೊಂದು ರೈತರ ಬಾಳೆತೋಟವನ್ನು ಧ್ವಂಸ ಮಾಡಿ, ಪಂಪ್‌ಸೆಟ್‌ ಪೈಪುಗಳನ್ನು ತುಳಿದು ನಾಶ ಮಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಗ್ರಾಮದ ರೈತ ಲೋಕೇಶ್ ಅವರ ಬಾಳೆತೋಟಕ್ಕೆ ನುಗ್ಗಿರುವ ಒಂಟಿ ಸಲಗ ಫಸಲಿಗೆ ಬಂದಿದ್ದ ನೂರಕ್ಕೂ ಹೆಚ್ಚು ಬಾಳೆಮರಗಳನ್ನು ಧ್ವಂಸ ಮಾಡಿದೆ. ಘಟನೆಯಲ್ಲಿ ₹50 ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ತೆಂಗಿನಕಲ್ಲು ಅರಣ್ಯಪ್ರದೇಶದ ಕಡೆಯಿಂದ ಬಂದು ಚನ್ನಪ್ಪಾಜಿ ಬೆಟ್ಟದಿಂದ ಈ ಭಾಗಕ್ಕೆ ಬಂದಿರುವ ಒಂಟಿ ಸಲಗ ರೈತರ ಬೆಳೆಗಳ ಮೇಲೆ ದಾಳಿ ಮಾಡುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಒಂಟಿ ಸಲಗವನ್ನು ಕಾಡಿಗೆ ಅಟ್ಟಬೇಕು ಹಾಗೂ ಬೆಳೆ ಕಳೆದುಕೊಂಡಿರುವ ರೈತನಿಗೆ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.