ADVERTISEMENT

ಕರಡಿ ದಾಳಿ: ಯುವಕನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 6:01 IST
Last Updated 31 ಜುಲೈ 2022, 6:01 IST
ಕಥೆಗಾರ ರಾಜೇಂದ್ರ ಬಿ. ಶೆಟ್ಟಿ ಅವ್ವೇರಹಳ್ಳಿ ಪಬ್ಲಿಕ್ ಶಾಲೆಗೆ ಪುಸ್ತಕಗಳನ್ನು ನೀಡಿದರು. ಬೈರೇಗೌಡ, ದಿನೇಶ್‌ ಬಿಳಗುಂಬ, ಜಿ.ಪಿ. ರಾಮಣ್ಣ ಇದ್ದರು
ಕಥೆಗಾರ ರಾಜೇಂದ್ರ ಬಿ. ಶೆಟ್ಟಿ ಅವ್ವೇರಹಳ್ಳಿ ಪಬ್ಲಿಕ್ ಶಾಲೆಗೆ ಪುಸ್ತಕಗಳನ್ನು ನೀಡಿದರು. ಬೈರೇಗೌಡ, ದಿನೇಶ್‌ ಬಿಳಗುಂಬ, ಜಿ.ಪಿ. ರಾಮಣ್ಣ ಇದ್ದರು   

ಮಾಗಡಿ: ಕರಡಿ ದಾಳಿಯಿಂದ ತಪ್ಪಿಸಿಕೊಳ್ಳಲು ಭಯದಿಂದ ಓಡುವಾಗ ಆಯತಪ್ಪಿ ನೆಲಕ್ಕೆ ಬಿದ್ದು ಯುವಕನೊಬ್ಬ ಕಾಲು ಮುರಿದುಕೊಂಡಿರುವ ಘಟನೆ ಗುರುವಾರ ನಡೆದಿದೆ.

ತಾಲ್ಲೂಕಿನ ಕಕ್ಕೆಪ್ಪನಪಾಳ್ಯ ಬಳಿ ಮೇಕೆ ಮೇಯಿಸುತ್ತಿದ್ದ ಶಿವಾನಂದ ಅವರ ಬಲಗಾಲು ಮುರಿದಿದೆ.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಆತ ಮೇಕೆ ಮೇಯಿಸುತ್ತಿದ್ದಾಗ ಪೊದೆಯಲ್ಲಿದ್ದ ಕರಡಿ ದಾಳಿ ಮಾಡಲು ಮುಂದಾಗಿದೆ. ಅದರ ಗುಟುರಿನ ಶಬ್ದ ಕೇಳಿದ ಕೂಡಲೇ ಓಡಲಾರಂಭಿಸಿದ್ದಾನೆ. ಆ ವೇಳೆ ಬಿದ್ದು ಗಾಯಗೊಂಡಿದ್ದಾರೆ.

ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರು ಕೂಗಿಕೊಂಡಿದ್ದರಿಂದ ಕರಡಿ ಹೆದರಿ ಓಡಿಹೋಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.