ADVERTISEMENT

ಮಾಗಡಿ: ಬಿಸ್ಕೂರು ರಂಗನಾಥ ದೇಗುಲದಲ್ಲಿ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 3:14 IST
Last Updated 7 ಡಿಸೆಂಬರ್ 2025, 3:14 IST
<div class="paragraphs"><p>ಮಾಗಡಿ ತಾಲ್ಲೂಕಿನ ಬಿಸ್ಕೂರು ರಂಗನಾಥಸ್ವಾಮಿ ದೇಗುಲದಲ್ಲಿ ದೀಪೋತ್ಸವ ಅಂಗವಾಗಿ ವಿಶೇಷ ರಂಗೋಲಿ ಬಿಡಿಸಲಾಗಿತ್ತು</p></div>

ಮಾಗಡಿ ತಾಲ್ಲೂಕಿನ ಬಿಸ್ಕೂರು ರಂಗನಾಥಸ್ವಾಮಿ ದೇಗುಲದಲ್ಲಿ ದೀಪೋತ್ಸವ ಅಂಗವಾಗಿ ವಿಶೇಷ ರಂಗೋಲಿ ಬಿಡಿಸಲಾಗಿತ್ತು

   

ಕುದೂರು: ತಾಲ್ಲೂಕಿನ‌ ಕುದೂರು ಹೋಬಳಿ ಬಿಸ್ಕೂರು ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ದೀಪೋತ್ಸವ ನಡೆಯಿತು.

ಬೆಳಗ್ಗೆ ದೇವರಿಗೆ ವಿಶೇಷ ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು. ಸೊಂದಲಗೆರೆ ಗ್ರಾಮಸ್ಥರು ರಂಗನಾಥ ಉತ್ಸವ ಮೂರ್ತಿ ಮೆರವಣಿಗೆ ಮಾಡಲಾಯಿತು. ದೇವಲಾಯದ ಆವರಣದಲ್ಲಿ ಸಂಜೆ ಭಕ್ತರಿಂದ‌ ದೀಪ ಹಚ್ಚುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ಸೋಮಶೇಖರ್ ತಂಡದಿಂದ ಸುಂದರ ರಂಗೋಲಿ ಬಿಡಿಸಲಾಗಿತ್ತು. ಬಂದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಬಿಸ್ಕೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

ADVERTISEMENT