ADVERTISEMENT

ರಾಮನಗರ: ಸ್ವಾಮೀಜಿ ವಿಡಿಯೊ ಚಿತ್ರೀಕರಿಸಿ ₹4 ಕೋಟಿಗೆ ಬ್ಲಾಕ್‌ಮೇಲ್‌

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 5:34 IST
Last Updated 1 ಏಪ್ರಿಲ್ 2023, 5:34 IST
   

ರಾಮನಗರ: ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಬೆತ್ತಲಾಗಿದ್ದ ವಿಡಿಯೊ ಚಿತ್ರೀಕರಿಸಿ ಸ್ವಾಮೀಜಿಯೊಬ್ಬರಿಗೆ ₹4 ಕೋಟಿ ನೀಡುವಂತೆ ಬ್ಲಾಕ್‌ಮೇಲ್‌ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು ಶುಕ್ರವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ರಾಮನಗರದ ಅರ್ಚಕರಹಳ್ಳಿಯ ಆದಿಚುಂಚನಗಿರಿ ಶಾಖಾ ಮಠದ ಕಿರಿಯ ಶ್ರೀಗಳಾದ ಕೃಪಾನಂದನಾಥ ಸ್ವಾಮೀಜಿ ತಮಗೆ ಬ್ಲಾಕ್‌ಮೇಲ್‌ ಕರೆಗಳು ಬರುತ್ತಿರುವ ಕುರಿತು ಮಾ.29ರಂದು ರಾಮನಗರ ಗ್ರಾಮೀಣ ಠಾಣೆಗೆ ದೂರು ನೀಡಿದ್ದರು.

ದೂರಿನಲ್ಲಿ ಏನಿದೆ?: ವಿಡಿಯೊ ಚಿತ್ರೀಕರಣಗೊಂಡ ಬಗೆ ಹಾಗೂ ನಂತರದಲ್ಲಿ ನಿರಂತರವಾಗಿ ಇಬ್ಬರು ವ್ಯಕ್ತಿಗಳು ಹಣಕ್ಕಾಗಿ ಒತ್ತಾಯಿಸುತ್ತಿದ್ದ ಕುರಿತು ಸ್ವಾಮೀಜಿ ದೂರಿನಲ್ಲಿ ವಿವರಿಸಿದ್ದಾರೆ.

ADVERTISEMENT

‘ಈಚೆಗೆ ನನಗೆ ಚರ್ಮದ ಅಲರ್ಜಿ ಆಗಿತ್ತು. ವೈದ್ಯರ ಸಲಹೆ ಮೇರೆಗೆ ದಿನ ಬೆಳಿಗ್ಗೆ ಹಾಗೂ ಸಂಜೆ ಮೈಗೆ ಔಷಧಿ ಹಚ್ಚಿ
ಕೊಂಡು ಮಲಗುತ್ತಿದ್ದೆ. ಈ ವಿಚಾರ ತಿಳಿದವರು ನನ್ನ ಕೊಠಡಿಯಲ್ಲಿ ಮೊಬೈಲ್‌ ಇಟ್ಟು ನಾನು ಬೆತ್ತಲಾಗಿರುವ ಚಿತ್ರೀಕರಣ ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.

‘ಮಾ.20ರಂದು ಸಂಜೆ ರವಿಕುಮಾರ್ ಎಂಬ ವ್ಯಕ್ತಿ ಮಠದಲ್ಲಿನ ನನ್ನ ಕೊಠಡಿಗೆ ಬಂದು ನನ್ನ ವಿಡಿಯೊ ತೋರಿಸಿ ₹4 ಕೋಟಿಗೆ ಬೇಡಿಕೆ ಇಟ್ಟರು. ಕೇಳಿದಷ್ಟು ಹಣ ಕೊಡದೆ ಹೋದರೆ ₹4 ಲಕ್ಷ ಕೊಟ್ಟು ಇದೇ ವಿಡಿಯೊಗಳನ್ನು ಬೇಕಾದಂತೆ ಎಡಿಟ್‌ ಮಾಡಿಸಿ ಜಾಲತಾಣಗಳಲ್ಲಿ ಹರಿಬಿಡುವು ದಾಗಿ ಬೆದರಿಕೆ ಹಾಕಿದರು. ನಂತರದಲ್ಲಿಯೂ ನಿರಂತರವಾಗಿ ಬ್ಲಾಕ್‌ಮೇಲ್‌ ಸಂದೇಶಗಳನ್ನು ಕಳುಹಿಸಿ ಬೆದರಿಕೆ ಒಡ್ಡಿದ್ದಾರೆ. ನನ್ನ ಕೊಠಡಿಗೆ ಆಗಾಗ್ಗೆ ಬರುತ್ತಿದ್ದ ಲಿಖಿತ್ ಎಂಬ ವ್ಯಕ್ತಿ ಈ ವಿಡಿಯೊ ಚಿತ್ರೀಕರಿಸಿರುವ ಸಾಧ್ಯತೆ ಇದೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.