ADVERTISEMENT

ರಕ್ತದೊತ್ತಡ, ಮಧುಮೇಹ ನಿರ್ಲಕ್ಷ್ಯ ಬೇಡ: ಶಾಸಕ ಎಚ್.ಸಿ.ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 14:20 IST
Last Updated 12 ಏಪ್ರಿಲ್ 2025, 14:20 IST
<div class="paragraphs"><p>ಮಾಗಡಿ ತಾಲ್ಲೂಕಿನ ಮತ್ತಿಕೆರೆ ಗ್ರಾಮದಲ್ಲಿ ನಡೆದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಕನ್ನಡಕ ವಿತರಣೆ ಮಾಡಿದರು</p></div>

ಮಾಗಡಿ ತಾಲ್ಲೂಕಿನ ಮತ್ತಿಕೆರೆ ಗ್ರಾಮದಲ್ಲಿ ನಡೆದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಕನ್ನಡಕ ವಿತರಣೆ ಮಾಡಿದರು

   

ಮಾಗಡಿ: ಯಾವುದೇ ಕಾರಣಕ್ಕೂ ರಕ್ತದೊತ್ತಡ ಮತ್ತು ಮಧುಮೇಹ ಕಾಯಿಲೆಯನ್ನು ನಿರ್ಲಕ್ಷಿಸಬಾರದು. ಇವು ವಾಸಿಯಾಗುವುದಿಲ್ಲ. ಆದರೆ ವೈದ್ಯರ ಸಲಹೆಯಂತೆ ಔಷಧಿ ಪಡೆದುಕೊಂಡರೆ ಕಾಯಿಲೆಯಿಂದ ಆಗುವ ಹಾನಿ ತಡೆಯಬಹುದು ಎಂದು ಶಾಸಕ ಎಚ್‌.ಸಿ. ಬಾಲಕೃಷ್ಣ ಹೇಳಿದರು.

ತಾಲ್ಲೂಕಿನ ಮತ್ತಿಕೆರೆಯಲ್ಲಿ ಎಂ.ಆರ್. ರಾಮಯ್ಯ ಆಸ್ಪತ್ರೆ, ಮಹಾನಾಡು ಕಟ್ಟೆಮನೆ ಮತ್ತು ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ADVERTISEMENT

ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರಗಳು ನಡೆದರೆ ಹೆಚ್ಚಿನ ಜನರಿಗೆ ಅನುಕೂಲ ಆಗುತ್ತದೆ. ಇಲ್ಲಿ ಪರೀಕ್ಷೆ ಮಾಡಿದ ನಂತರ ವೈದ್ಯರು ಹೇಳುವ ರೀತಿಯಲ್ಲಿ ಪಥ್ಯದೊಂದಿಗೆ ಔಷಧಿ ತೆಗೆದುಕೊಳ್ಳಬೇಕು. ತಪಾಸಣೆ ಮಾಡಿಸಿಕೊಂಡು ರೋಗ ಪತ್ತೆಗೆ ಸೀಮಿತವಾಗಬಾರದು ಎಂದರು.

ಇಂತಹ ಶಿಬಿರಗಳು ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ನಡೆಯಬೇಕು ಎಂದರು.

ರಾಜ್ಯ ಸಹಕಾರ ಪತ್ತಿನ ಮಹಾಮಂಡಳಿ ನಿರ್ದೇಶಕ ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ಕಾಂಗ್ರೆಸ್ ಯುವ ಮುಖಂಡ ಎಂ.ಎಸ್.ರಾಜು  ಮಾತನಾಡಿದರು.

ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತರಿಗೆ ಉಚಿತವಾಗಿ ಸೀರೆ ವಿತರಿಸಲಾಯಿತು.

ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2.30 ಗಂಟೆಯವರೆಗೂ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಔಷಧಿ ಹಾಗೂ ಉಚಿತ ಕನ್ನಡಕ ವಿತರಣೆ ಮಾಡಲಾಯಿತು.

ದಿಶಾ ಸಮಿತಿ ಮಾಜಿ ನಿರ್ದೇಶಕ ಜೆ.ಪಿ.ಚಂದ್ರೇಗೌಡ, ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆಂಚೇಗೌಡ, ಪ್ರಸಾದ್, ಕಿಟ್ಟಿ, ಎಂ.ಆರ್. ವೆಂಕಟೇಶ್, ಕೆಂಪೇಗೌಡ, ಪರಮೇಶ್ವರ್, ಎಚ್. ನರಸಿಂಹಮೂರ್ತಿ, ಗಂಗಯ್ಯ, ರಾಮಚಂದ್ರು, ಪರಮೇಶ್ವರ್, ಮೂರ್ತಿ, ಕಲ್ಲುದೇವನಹಳ್ಳಿ ಮಹದೇವ್, ಶಿವಣ್ಣ ಭಾಗವಹಿಸಿದ್ದರು.

ಮತ್ತಿಕೆರೆ ಗ್ರಾಮದಲ್ಲಿ ನಡೆದ ಆರೋಗ್ಯ ಶಿಬಿರದಲ್ಲಿ ಶಾಸಕ ಬಾಲಕೃಷ್ಣ ಶುಗರ್ ತಪಾಸಣೆ ಮಾಡಿಸಿಕೊಂಡು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.