ADVERTISEMENT

ಸಂಭ್ರಮದ ಗುರು ರಾಘವೇಂದ್ರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 13:09 IST
Last Updated 17 ಆಗಸ್ಟ್ 2019, 13:09 IST
ಗುರು ರಾಘವೇಂದ್ರ ಸ್ವಾಮಿ ರಥೋತ್ಸವ ವೈಭವದಿಂದ ನಡೆಯಿತು
ಗುರು ರಾಘವೇಂದ್ರ ಸ್ವಾಮಿ ರಥೋತ್ಸವ ವೈಭವದಿಂದ ನಡೆಯಿತು   

ಮಾಗಡಿ: ಗುರು ರಾಘವೇಂದ್ರ ಸೇವಾ ಟ್ರಸ್ಟ್‌ನ ವತಿಯಿಂದ ಮಧ್ಯಾರಾಧನೆ ಅಂಗವಾಗಿ ಗುರು ರಾಯರ ರಥೋತ್ಸವ ವೈಭವದಿಂದ ನಡೆಯಿತು.

ಹೂವಿನಿಂದ ಅಲಂಕರಿಸಲಾಗಿದ್ದ ರಥದಲ್ಲಿ ರಾಘವೇಂದ್ರ ಸ್ವಾಮಿ ಉತ್ಸವ ಮೂರ್ತಿಯನ್ನಿಟ್ಟು ಪೂಜಿಸಲಾಯಿತು. ಮಾಡಬಾಳ್‌ ಎಂ.ಕೆ.ಗುಂಡೂರಾವ್‌ ಕುಟುಂಬದವರು ಗರ್ಭಗುಡಿಗೆ ಹೂವಿನ ಅಲಂಕಾರ ಮಾಡಿಸಿದ್ದರು.

ಪಟ್ಟಣದ ಮುಖ್ಯಬೀದಿಗಳಲ್ಲಿ ಮಂಗಳವಾದ್ಯ ಸಹಿತ ರಾಯರ ರಥೋತ್ಸವ ನಡೆಯಿತು. ಬ್ರಾಹ್ಮಣ ಶ್ರೀಮಾತಾ ಮಹಿಳಾ ಮಂಡಳಿ, ಟ್ರಸ್ಟ್‌ನ ಪದಾಧಿಕಾರಿಗಳು ರಥ ಎಳೆದರು.

ADVERTISEMENT

ಜೆಡಿಎಸ್‌ ಮುಖಂಡ ಮಂಡಿ ರಂಗೇಗೌಡ, ನಿವೃತ್ತ ಡಿವೈಎಸ್‌ಪಿ ಅಶೋಕ್‌ ಕುಮಾರ್‌, ರಾಜ್ಯ ಬೆಸ್ಕಾಂ ನಿರ್ದೇಶಕ ಬಿ.ವಿ.ಜಯರಾಮು, ನೇತೇನಹಳ್ಳಿ ಜಯರಾಮು, ಜುಟ್ಟನಹಳ್ಳಿ ನಿಂಗಪ್ಪ, ವಕೀಲ ಸತೀಶ್‌ ಪ್ರಸಾದ್‌, ಆಗಮಿಕ ವಿದ್ವಾನ್‌ ಕೆ.ಎನ್‌.ಗೋಪಾಲ ದೀಕ್ಷಿತ್‌, ಮಾಗಡಿ ಶಂಕರಣ್ಣ, ಕೃಷ್ಣಮೂರ್ತಿ, ಟ್ರಸ್ಟ್‌ನ ಪದಾಧಿಕಾರಿಗಳು ಇದ್ದರು. ಸಾಮೂಹಿಕ ಭೋಜನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.