ಚನ್ನಪಟ್ಟಣ: ಸಂಸ್ಕೃತಿಯ ಪ್ರತೀಕವಾಗಿರುವ ಪೌರಾಣಿಕ ನಾಟಕ ಕಲೆ ಇಂದು ಅಸ್ತಿತ್ವ ಕಳೆದುಕೊಳ್ಳುತ್ತಿದ್ದು ಈ ಕಲೆಯನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕೆಲಸವಾಗಬೇಕಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಅಭಿಪ್ರಾಯಪಟ್ಟರು.
ನಗರದ ಶತಮಾನೋತ್ಸವ ಭವನದಲ್ಲಿ ಶನಿವಾರ ತಾ.ಪಂ. ಮಾಜಿ ಸದಸ್ಯ ದಿವಗಂತ ಶಿವಲಿಂಗಯ್ಯ ಸ್ಮರಣಾರ್ಥ ಮಹದೇಶ್ವರ ಕೃಪಾ ಪೋಷಿತ ನಾಟಕ ಮಂಡಳಿ ಆಯೋಜಿಸಿದ್ದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾತ್ರಿಯಿಂದ ಬೆಳಗಿನ ಜಾವದ ತನಕ ಮನೆ ಮಂದಿಯೆಲ್ಲಾ ಕುಳಿತು ನಾಟಕ ನೋಡುತ್ತಿದ್ದ ದಿನಗಳು ದೂರಾಗಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ನಾಟಕ ನೋಡುವಂತಹ ಸ್ಥಿತಿ ಬಂದಿದೆ. ಈ ಬಗ್ಗೆ ಎಲ್ಲರೂ ಎಚ್ಚೆತ್ತು ನಾಟಕ ಕಲೆ ಉಳಿಸುವತ್ತ ಗಮನಹರಿಸಬೇಕು ಎಂದರು.
ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್ ಮಾತನಾಡಿದರು. ನಾಟಕ ಪ್ರದರ್ಶನಕ್ಕೆ ಸಹಕಾರ ನೀಡಿದ ಸಮಾಜ ಸೇವಕ ನುಣ್ಣೂರು ಬಲರಾಮ್, ಒಕ್ಕಲಿಗರ ಸಂಘದ ನಿರ್ದೇಶಕ ಚಕ್ಕೆರೆ ವೆಂಕಟರಾಮೇಗೌಡ, ನಗರಸಭೆ ಅಧ್ಯಕ್ಷ ವಾಸಿಲ್ ಆಲಿಖಾನ್, ಯಶಸ್ ಗೌಡ, ಬೋರ್‌ವೆಲ್ ರಂಗನಾಥ್, ಸುನೀಲ್, ಮಾಕಳಿ ಬೋರೇಗೌಡ, ಚಂದ್ರು ಅವರನ್ನು ಸನ್ಮಾನಿಸಲಾಯಿತು.
ನಾಟಕ ಪ್ರದರ್ಶನ ವ್ಯವಸ್ಥಾಪಕರಾದ ಚಕ್ಕೆರೆ ರಾಮು, ಬ್ರಹ್ಮಣೀಪುರ ಪ್ರಸನ್ನ, ಕೃಷ್ಣಾಪುರ ಶಿವರಾಂ, ಮಳೂರುಪಟ್ಟಣ ಕುಮಾರ್, ಮಳೂರು ರಾಜೇಶ್, ಚಿನ್ನಗಿರಿಗೌಡ, ಶ್ಯಾನುಬೋಗನಹಳ್ಳಿ ಪ್ರದೀಪ್, ಸಾದರಹಳ್ಳಿ ಶಿವರಾಜ್, ಎಂಪಿಸಿಎಸ್ ನೌಕರರ ಸಂಘದ ಅಧ್ಯಕ್ಷ ಗರಕಹಳ್ಳಿ ಶಿವಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.