
ಚನ್ನಪಟ್ಟಣ: ಚಂಡೀಗಢದ ಪ್ಲಾಕ್ಷಾ ವಿಶ್ವವಿದ್ಯಾಲಯದಲ್ಲಿ ಈಚೆಗೆ ಆಯೋಜಿಸಿದ್ದ ರಾಷ್ಟ್ರಮಟ್ಟದ ಯಂಗ್ ಕ್ರಿಯೇಟರ್ ಲೀಗ್ ಸ್ಪರ್ಧೆ ಪ್ರಾಜೆಕ್ಟ್ ಪ್ರೆಸೆಂಟೇಷನ್ ವಿಭಾಗದಲ್ಲಿ ತಾಲ್ಲೂಕಿನ ಹೊಂಗನೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಎಚ್.ವಿ.ದಿಗಂತ್ ಗೌಡ ತಯಾರಿಸಿದ ಕಾರ್ಬನ್ ಶುದ್ಧೀಕರಣ ಮಾದರಿಯು ಆಯ್ಕೆಯಾಗಿದೆ.
ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ 930 ತಂಡಗಳು ಭಾಗವಹಿಸಿ ತಮ್ಮ ನವೀನ ಮಾದರಿ ಸಲ್ಲಿಸಿದ್ದವು. ತಜ್ಞರ ಪರಿಶೀಲನೆ ಬಳಿಕ 63 ಮಾದರಿಗಳು ಆಯ್ಕೆಯಾಗಿದ್ದವು. ಅವುಗಳಲ್ಲಿ ಹೊಂಗನೂರು ಸರ್ಕಾರಿ ಶಾಲೆ ವಿದ್ಯಾರ್ಥಿ ಮಾದರಿಯು ಆಯ್ಕೆಯಾಗಿ ಮೆಚ್ಚುಗೆ ಗಳಿಸಿದೆ.
ಭಾರತಿ ಏರ್ ಟೆಲ್ ಫೌಂಡೇಶನ್ ಸಹಕಾರದೊಂದಿಗೆ ವಿದ್ಯಾರ್ಥಿ ದಿಗಂತ್ ಗೌಡ ಮಾದರಿ ತಯಾರಿಸಿದ್ದರು. ಇದಕ್ಕೆ ಫೌಂಡೇಶನ್ ಅಕಾಡೆಮಿಕ್ ಮೆಂಟರ್ ಯಶವಂತ ಕುಮಾರ್ ಹಾಗೂ ಮತ್ತೊಬ್ಬ ವಿದ್ಯಾರ್ಥಿ ಮಂಜುನಾಥ್ ಮಾರ್ಗದರ್ಶನ ನೀಡಿದ್ದರು ಎಂದು ಶಾಲೆ ಮುಖ್ಯಶಿಕ್ಷಕಿ ಬಾಲ ಸರಸ್ವತಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.