ಚನ್ನಪಟ್ಟಣ: ರಾಜ್ಯದಲ್ಲಿ ಹೆಚ್ಚು ಹಾಲು ಉತ್ಪಾದನೆ ಮಾಡುತ್ತಿರುವ ತಾಲ್ಲೂಕುಗಳಲ್ಲಿ ಚನ್ನಪಟ್ಟಣ ಪ್ರಥಮ ಸ್ಥಾನ ಪಡೆದಿದೆ. ಇದು ತಾಲ್ಲೂಕಿನ ಹೆಮ್ಮೆ ಎಂದು ಬಮೂಲ್ ನಿರ್ದೇಶಕ ಎಚ್.ಸಿ. ಜಯಮುತ್ತು ಪ್ರಶಂಸಿಸಿದರು.
ತಾಲ್ಲೂಕಿನ ಹಾರೋಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಹೈನುಗಾರರು ಒಕ್ಕೂಟದ ಸಕಲ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಜೀವವಿಮೆ, ರಾಸು ವಿಮೆ, ಇತರೆ ಸಾಲ ಸೌಲಭ್ಯಗಳು, ಕೊಟ್ಟಿಗೆ, ಮುಖ್ಯವಾಗಿ ಪಶು ಆಹಾರ ಪದಾರ್ಥಗಳನ್ನು ಖರೀದಿಸಿ ಗುಣಮಟ್ಟದ ಹಾಲನ್ನು ಉತ್ಪಾದಿಸಬೇಕುಎಂದು ಕಿವಿಮಾತು ಹೇಳಿದರು.
ಬಮೂಲ್ ಚನ್ನಪಟ್ಟಣ ಶಿಬಿರದ ವಿಸ್ತರಣಾಧಿಕಾರಿ ಆನಂದ್ ಕುಮಾರ್ ಮಾತನಾಡಿ, ರೈತರು ಹೈನುಗಾರಿಕೆಯಲ್ಲಿ ಆಧುನಿಕತೆ ಅಳವಡಿಸಿಕೊಂಡು ಲಾಭ ಪಡೆಯಬೇಕು ಎಂದರು.
ಸಂಘದ ಸಿಇಒ ಪುಟ್ಟಸ್ವಾಮಿ, ಸಂಘದ ಮಹಾಸಭೆಯ ವರದಿ ಮಂಡಿಸಿದರು. ಸಂಘದ ನಿರ್ದೇಶಕ ಟಿ. ರಾಮೇಗೌಡ, ಸಿದ್ದೇಗೌಡ, ಶಿವರಾಜು, ಎಚ್.ಎಸ್. ಸೋಮಶೇಖರ್, ಎಚ್.ಎಸ್. ಮುತ್ತುರಾಜು, ಚಿಕ್ಕಹೈದಯ್ಯ, ಎಸ್. ಉಮಾ, ಸುಂದರಮ್ಮ, ಹಾಲು ಪರೀಕ್ಷಕ ಎಚ್.ಸಿ. ಮುತ್ತುರಾಜು, ಸಹಾಯಕ ನಾಗೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.